ಮರದ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಪಣಪಿಲ ಗ್ರಾಮದ ಸುರೇಶ್ ಅವರ ಕೈ ಮರ ಕತ್ತರಿಸುವ ಯಂತ್ರಕ್ಕೆ ತಾಗಿ ಗಂಭೀರವಾದ ಗಾಯವಾಗಿ ಒಂದು ಕೈ ಬಲವನ್ನೇ ಕಳೆದುಕೊಂಡಿತ್ತು.
ಹಿಂದಿನಂತೆ ಮತ್ರೆ ಕೆಲಸ ಮಾಡಲಾಗದೆ ಅಸಹಾಯಕರಾಗಿ ಸಂಕಷ್ಟದಲ್ಲಿದ್ದ ಸುರೇಶ್ ಅವರು ಪ್ರತಿದಿನ ಫಿಜಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜೀವನ,ಕುಟುಂಬ ನಿರ್ವಹಣೆ,ಚಿಕಿತ್ಸೆ ವೆಚ್ಚ ಹೀಗೆಲ್ಲಾ ಸುರೇಶ್ ಅವರು ಸಮಸ್ಯೆಗಳಲ್ಲಿರುವ ಮಾಹಿತಿ ರುದ್ರಾಂಶ ಕನ್ಸ್ಟ್ರಕ್ಷನ್ಸ್ ಮಾಲಕ ಅಜಯ್ ಶೆಟ್ಟಿ ಅವರ ಗಮನಕ್ಕೆ ಬಂದಿದೆ.
ತನ್ನ ಸ್ನೇಹಿತರೊಂದಿಗೆ ಸುರೇಶ್ ಅವರ ಮನೆಗೆ ತೆರಳಿ ಆರ್ಥಿಕ ಸಹಾಯ ನೀಡುವ ಮೂಲಕ ಮಾನವೀಯವಾಗಿ ಸ್ಪಂದಿಸಿ ಸಂಕಷ್ಟದಲ್ಲಿದ್ದ ಸುರೇಶ್ ಅವರಿಗೆ ನೆರವಾಗಿದ್ದಾರೆ.
ಶಿರ್ತಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕೋಟ್ಯಾನ್, ವೇದಪ್ರಕಾಶ್ ಪಡಿವಾಳ್ ಅಳಿಯೂರು ಹಾಗೂ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಾಲಕ ಹರಿಶ್ಚಂದ್ರ ಕೆ.ಸಿ.ಅವರು ಈ ಸಂದರ್ಭದಲ್ಲಿದ್ದರು.












