ಮೂಡುಬಿದಿರೆ ಪುತ್ತಿಗೆ ಸಮೀಪದ ನೆಲ್ಲಿಗುಡ್ಡೆಯಲ್ಲಿ ಇಂದು ಸಂಜೆ ಡಿಬಿಎಲ್ ವಾಹನ ಢಿಕ್ಕಿಯಾಗಿ ಅದೇ ಸಂಸ್ಥೆಯ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.
ಹೈವೇ ಕಾಮಗಾರಿ ನಡೆಯುತ್ತಿದ್ದು ರಸ್ತೆ ಬದಿ ಕೆಲಸದಲ್ಲಿ ನಿರತನಾಗಿದ್ದ ಕಾರ್ಮಿಕನಿಗೆ ಡಿಬಿಎಲ್ ಸಂಸ್ಥೆಯ ವಾಹನವೊಂದು ಢಿಕ್ಕಿಯಾಗಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಾರ್ಮಿಕನ ಹೆಸರು,ವಿಳಾಸ ಇನ್ನಷ್ಟೇ ತಿಳಿದು ಬರಬೇಕಿದ್ದು ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಢಿಕ್ಕಿಯ ರಭಸಕ್ಕೆ ಕಾರ್ಮಿಕನ ಎರಡೂ ಕಾಲುಗಳೂ ಪುಡಿಪುಡಿಯಾಗಿದೆ.












