‘ಪ್ರೇಮದ ಊರಲಿ.‌..ಹೃದಯದ ತೇರಲಿ..’. ಹಾಡಿದ ಪುಟಾಣಿಗಳು. ಈ ಹಾಡಿನ ಸಂಗೀತ ನಿರ್ದೇಶಕ ಯಾರು ಗೊತ್ತಾ??

Picture of Namma Bedra

Namma Bedra

Bureau Report

“ಪ್ರೇಮದ ಊರಲಿ
ಹೃದಯದ ತೇರಲಿ
ಒಲವಿನ ಮಳೆಯಾಗಿದೆ

ಕಣ್ಣಾ ಹನಿಗಳು
ನಗುತಿವೆಯೋ
ಕಾಣದೆ ಮರೆಯಾಗಿ”

ಈ ಮಧುರವಾದ ಪ್ರೇಮಗೀತೆ ಎಲ್ಲರ ಹೃದಯ ಗೆದ್ದಿದೆ. ಈಗ ಎಲ್ಲೆಲ್ಲೂ ‘ಪ್ರೇಮದ ಊರಲಿ’ ಚಿತ್ರದ್ದೇ ಹವಾ. ಅದರ ಟೈಟಲ್ ಸಾಂಗ್ ಕೂಡಾ ಈಗ ಎಲ್ಲರ ಸ್ಟೇಟಸ್ ಗಳಲ್ಲಿ ರಾರಾಜಿಸುತ್ತಿದೆ.
ಪ್ರೇಮಿಗಳ ಪಾಲಿಗಂತೂ ಈ ಹಾಡು ಪ್ರೇಮಿಯಷ್ಟೇ ಇಷ್ಟವಾಗಿದೆ.
ಅಂದಹಾಗೆ,
ಈ ಚಿತ್ರದ ಸಂಗೀತ ನಿರ್ದೇಶಕ ನಮ್ಮದೇ ಪಕ್ಕದ ಕಾರ್ಕಳದ ಸುನಾದ ಗೌತಮ್ ನಾಯಕ್.
ಚಿತ್ರದ ಟೈಟಲ್ ಸಾಂಗ್ ಹಾಡಿದ ಪುಟಾಣಿಗಳು ಕಾರ್ಕಳದ ಜೇಸಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು. ಇಂಗ್ಲಿಷ್ ಮೀಡಿಯಂ ಮಕ್ಕಳಾದರೂ ಕನ್ನಡದ ಈ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ.ಅವರೊಂದಿಗೆ ಶಿಕ್ಷಕಿ,ನೃತ್ಯ ನಿರ್ದೇಶಕಿ ಕಾರ್ಕಳದ ವಂದನಾ ರೈ ಅವರು ಕೂಡಾ ಧ್ವನಿಗೂಡಿಸಿದ್ದಾರೆ.
ಈ ಚಿತ್ರ,ಚಿತ್ರದ ಹಾಡು,ಸಂಗೀತ ನಿರ್ದೇಶಕ ಹೇಗೆ ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗಿದ್ದಾರೋ ಅಷ್ಟೇ ಆ ಪುಟಾಣಿಗಳು ಕೂಡಾ ಫೇಮಸ್ ಆಗಿದ್ದಾರೆ.
ಹಾಡಿನ ಸಾಹಿತ್ಯ ಕೂಡಾ ಚೆನ್ನಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top