ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ತಿರುವಿನಲ್ಲಿ ಬುಧವಾರ ಸಂಜೆ ನಡೆದಿದ್ದ ಸ್ಕೂಟಿ ಸ್ಕಿಡ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಯುವಕನೂ ಸಾವನ್ನಪ್ಪಿದ್ದಾನೆ.
ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಚಂದ್ರ ಎಂಬವರ ಪುತ್ರ ದೀಕ್ಷಿತ್ ಪೂಜಾರಿ ಎಂಬ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬುಧವಾರ ಸಂಜೆ ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆ ಹೋಗುವಾಗ ಇವರ ಸ್ಕೂಟರ್ ಸ್ಕಿಡ್ ಆಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.
ಸುಧಾಕರ ಹೆಗ್ಡೆ ಅವರ ಪುತ್ರ ಪ್ರಶ್ವಿತ್ ಹೆಗ್ಡೆ ಸಂಜೆ ಮೃತಪಟ್ಟಿದ್ದು ರಾತ್ರಿ ವೇಳೆ ದೀಕ್ಷಿತ್ ಮೃತಪಟ್ಟಿದ್ದಾನೆ.
ಸ್ಕೂಟಿ ಸ್ಕಿಡ್ ಆದ ಪರಿಣಾಮ ಇಬ್ಬರು ಯುವಕರೂ ಮೃತಪಟ್ಟಿದ್ದಾರೆ.
ಬುಧವಾರ ಸಂಜೆ ಪುತ್ತಿಗೆಯ ನೆಲ್ಲಿಗುಡ್ಡೆ ಎಂಬಲ್ಲಿ ಡಿಬಿಎಲ್ ನ ವಾಹನ ಢಿಕ್ಕಿಯಾಗಿ ಅದೇ ಕಂಪೆನಿಯ ಕಾರ್ಮಿಕನೋರ್ವ ಮೃತಪಟ್ಟಿದ್ದು ಬುಧವಾರ ಒಂದೇ ದಿನ ಮೂರು ಸಾವು ಸಂಭವಿಸಿದೆ.












