ಎಸ್.ಕೆ.ಎಫ್.ನ ರಾಮಕೃಷ್ಣ ಆಚಾರ್ ಅವರಿಗೆ ‘ಶಾರದಾರತ್ನ’ ಪ್ರಶಸ್ತಿ

Picture of Namma Bedra

Namma Bedra

Bureau Report

ಶ್ರೀ ಕ್ಷೇತ್ರ ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ವತಿಯಿಂದ ನೀಡಲ್ಪಡುವ ‘ಬನ್ನಡ್ಕ ಶ್ರೀ ಶಾರದಾರತ್ನ’ ಪ್ರಶಸ್ತಿಗೆ ಬನ್ನಡ್ಕ ಎಸ್.ಕೆ.ಎಫ್.ಸಂಸ್ಥೆಯ ಸಂಸ್ಥಾಪಕ ಡಾ|ಜಿ.ರಾಮಕೃಷ್ಣ ಆಚಾರ್ ಅವರು ಆಯ್ಕೆಯಾಗಿದ್ದಾರೆ.
ಕಳೆದ ಮೂರು ದಶಕಗಳಿಂದ ದೇಶವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಎಸ್.ಕೆ.ಎಫ್.ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ರಾಮಕೃಷ್ಣ ಆಚಾರ್ ಅವರು ಶ್ರೇಷ್ಠ ಸಾಧಕ.
ಅತ್ಯಂತ ಕಡಿಮೆ ಬಂಡವಾಳದಲ್ಲಿ ಬನ್ನಡ್ಕದಲ್ಲಿ ಎಸ್.ಕೆ.ಎಫ್.ಸಂಸ್ಥೆಯನ್ನು ತೆರೆದು ಹಲವಾರು ಮಂದಿಗೆ ಕೈಗಾರಿಕಾ ತರಬೇತಿ,ಉದ್ಯೋಗ ನೀಡಿದ್ದಾರೆ.
1993 ರಲ್ಲಿ ಎಸ್.ಕೆ.ಎಫ್.ಬಾಯ್ಲರ್ಸ್ & ಡ್ರೈಯರ್ಸ್ ಎಂಬ ಸಂಸ್ಥೆಯನ್ನು ತೆರೆದು ತಮ್ಮ ಕಠಿಣ ಪರಿಶ್ರಮದ ಮೂಲಕ ಸಂಸ್ಥೆಯನ್ನು ಉತ್ತಂಗಕ್ಕೇರಿಸಿದ್ದಾರೆ.
ಎಸ್.ಕೆ.ಎಫ್.ಬಾಯ್ಲರ್ಸ್ & ಡ್ರೈಯರ್ಸ್, ಎಸ್.ಕೆ.ಎಫ್.ಎಲಿಕ್ಸರ್ ಇಂಡಿಯಾ ಇಂದು ದೇಶ ವಿದೇಶಗಳಲ್ಲಿ ಪರಿಚಿತ ಸಂಸ್ಥೆಯನ್ನಾಗಿ ಮಾಡಲು ಆಚಾರ್ ಅವರ ನಿರಂತರ ಮತ್ತು ಕಠಿಣ ಪರಿಶ್ರಮವಿದೆ.
ಇವರ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ದಯಾನಂದ ಪೈ ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top