ತಾಲೂಕು ಪಂಚಾಯತ್ ಚುನಾವಣೆಗೆ ಈಗಾಗಲೇ ಮೀಸಲಾತಿ ಪ್ರಕಟಗೊಂಡಿದ್ದು ಪಡುಮಾರ್ನಾಡು ತಾ.ಪಂ.ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮೇಶ್ ಶೆಟ್ಟಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಪಡುಮಾರ್ನಾಡು ಗ್ರಾಮ ಪಂಚಾಯತ್ ಗೆ 2005 ರಿಂದ 2026 ರ ವರೆಗೆ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿ ಸದಸ್ಯರಾಗಿದ್ದರು. ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿರುವ ರಮೇಶ್ ಶೆಟ್ಟಿ ಅವರು ಆ ಪರಿಸರದಲ್ಲಿ ‘ ಬಬ್ಬಣ್ಣ’ ಎಂದೇ ಖ್ಯಾತರಾದವರು.
ಪಡುಮಾರ್ನಾಡು ಯುವಕ ಮಂಡಲದ ಅಧ್ಯಕ್ಷರಾಗಿ ಒಂಭತ್ತನೇ ಬಾರಿಗೆ ಆಯ್ಕೆಯಾಗಿರುವ ಅವರು ಸಾಮಾಜಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿರುವವರು.
ಅಧಿಕಾರ ಇದ್ದರೂ ಇಲ್ಲದಿದ್ದರೂ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಕೊಳ್ಳುತ್ತಾ ಅದೆಷ್ಟೋ ಬಡ ಜನರ ಸೇವೆ ಮಾಡುತ್ತಾ ಬಂದವರು.
ಇದೀಗ ಪಡುಮಾರ್ನಾಡು ಕ್ಷೇತ್ರಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿರುವುದರಿಂದ ರಮೇಶ್ ಶೆಟ್ಟಿ ಅವರಿಗೂ ತಾ.ಪಂ.ಗೆ ಮೊದಲಬಾರಿ ಸ್ಪರ್ಧಿಸುವ ಅವಕಾಶವಿದೆ.
ಕ್ಷೇತ್ರದಲ್ಲಿ ಉತ್ತಮ ಜನಬೆಂಬಲವಿರುವ ರಮೇಶ್ ಶೆಟ್ಟಿ ಅವರಿಗೆ ಅವಕಾಶ ಸಿಕ್ಕಲ್ಲಿ ಗೆಲುವು ಸುಲಭವಾಗಲಿದೆ ಎಂದು ಆ ಭಾಗದ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.












