ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಗೆ ಮೀಸಲಾತಿ ಪ್ರಕಟವಾಗಿದ್ದು ಅದಕ್ಕೆ ಪೂರಕವಾಗಿ ಆಕಾಂಕ್ಷಿಗಳು ತಯಾರಾಗಿ ಸುದ್ದಿಯಾಗಿದ್ದರು.ಇನ್ನು ಕೆಲವೆಡೆ ಅವರಂತೆ,ಇವರಂತೆ ಎಂಬ ಅಂತೆಗಂತೆಗಳ ಸುದ್ದಿ ಕೂಡಾ ಜೋರಾಗಿಯೇ ಕೇಳಿ ಬರುತ್ತಿದೆ. ಆದರೆ, ಆಕಾಂಕ್ಷಿಗಳಾಗಿ ತಯಾರಾದವರಿಗೆಲ್ಲಾ ಒಂದು ಶಾಕಿಂಗ್ ನ್ಯೂಸ್.ಈಗ ಪ್ರಕಟವಾಗಿರುವುದು ಕರಡು ಮೀಸಲಾತಿ. ಅಧಿಕೃತವಾದ ಮೀಸಲಾತಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.
ಕರ್ಣಾಟಕ ರಾಜ್ಯಪತ್ರದಲ್ಲಿ ಪ್ರಕಟ ವಾದಂತೆ ಎಲ್ಲ ಕಡೆಗಳಲ್ಲೂ ಅಭ್ಯರ್ಥಿಗಳಾಗಲು ತಯಾರಿ ನಡೆಸಿದವರು ಇನ್ನೊಂದು ವಾರ ಮತ್ತೆ ಕಾಯಬೇಕಿದೆ.
ರಾಜ್ಯಪತ್ರದಲ್ಲಿ ತಿಳಿಸಿರುವಂತೆ ಏನಾದರೂ ಆಕ್ಷೇಪಣೆಗಳಿದ್ದರೆ ಇದೇ 19 ತಾರೀಕಿನೊಳಗೆ ತಿಳಿಸುವಂತೆ ಕೋರಲಾಗಿದ್ದು ಯಾರಾದರೂ ಈಗ ಪ್ರಕಟಗೊಂಡಿರುವ ಮೀಸಲಾತಿ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಲ್ಲಿ ಎಲ್ಲ ಮೀಸಲಾತಿಗಳೂ ಬದಲಾಗುವ ಸಾಧ್ಯತೆಯಿದೆ.
ಈಗ ಪ್ರಕಟಗೊಂಡಿರುವ ಕರಡು ಮೀಸಲಾತಿಯಲ್ಲಿ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಜಿ.ಪಂ.ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ ಹಾಗೂ ಪುತ್ತಿಗೆ ಜಿ.ಪಂ.ಕ್ಷೇತ್ರಕ್ಕೆ ಹಿಂದುಳಿದ ವರ್ಗ ಎ.ಮೀಸಲಾತಿ ಪ್ರಕಟಗೊಂಡಿದೆ.
ತಾಲೂಕು ಪಂಚಾಯತ್ ಗೆ ಸಂಬಂಧಿಸಿ ಬೆಳುವಾಯಿಗೆ ಅನುಸೂಚಿತ ಪಂಗಡ ಮಹಿಳೆ, ನೆಲ್ಲಿಕಾರಿಗೆ ಹಿಂದುಳಿದ ವರ್ಗ ಎ., ಪುತ್ತಿಗೆಗೆ ಸಾಮಾನ್ಯ ಮಹಿಳೆ, ತೆಂಕಮಿಜಾರಿಗೆ ಸಾಮಾನ್ಯ ಮಹಿಳೆ, ತೋಡಾರಿಗೆ ಹಿಂದುಳಿದ ವರ್ಗ ಎ, ವಾಲ್ಪಾಡಿಗೆ ಅನುಸೂಚಿತ ಜಾತಿ ಮಹಿಳೆ, ಕಡಂದಲೆಗೆ ಸಾಮಾನ್ಯ, ಪಡುಮಾರ್ನಾಡಿಗೆ ಸಾಮಾನ್ಯ ಹಾಗೂ ಕಲ್ಲಮುಂಡ್ಕೂರು ಗೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿದೆ. ಇದೆಲ್ಲಾ ಕರಡು ಮೀಸಲಾತಿಯಾಗಿದ್ದು ಅ.19 ರ ನಂತರವೇ ಅಧಿಕೃತ ಮೀಸಲಾತಿ ಪ್ರಕಟವಾಗಬೇಕಿದೆ.
ಈಗ ಪ್ರಕಟಗೊಂಡಿರುವ ಮೀಸಲಾತಿಗಳ ಪೈಕಿ ಕೆಲವೊಂದು ಬದಲಾವಣೆಗಳಾಗಲಿದೆ ಎಂಬ ಮಾಹಿತಿಯಿದೆ.ಹಾಗಾಗಿ ಆಕಾಂಕ್ಷಿಗಳು ಅಮಸರ ಮಾಡದೆ ಒಂತೆ ಕಾಯಬೇಕಾಗಿದೆ.












