ಎರಡು ವರ್ಷಗಳ ಹಿಂದೆ ಈ ಇಶ್ಯೂ ಭಾರೀ ಸುದ್ದಿಯಾಗಿತ್ತು.ನಮ್ಮದೇ ಪಕ್ಕದ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದ್ದ ಪ್ರಕರಣವಿದು.
ಅಜೆಕಾರಿನಲ್ಲಿ ಬ್ಯೂಟಿಪಾರ್ಲರ್ ಹೊಂದಿದ್ದ ಪ್ರತಿಮಾ ಎಂಬ ಆಂಟಿಯ ಪ್ರೇಮಾಯಣಕ್ಕೆ ಅಡ್ಡಿಯಾಗುತ್ತಾನೆಂದು ಕೈ ಹಿಡಿದ ಗಂಡನನ್ನೇ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಉಸಿರುಗಟ್ಟಿಸಿ ಉಸಿರನ್ನೇ ನಿಲ್ಲಿಸಿದ್ದ ಬ್ಯೂಟಿ-ಪಾರ್ಲರ್ ಆಂಟಿಯೋರ್ವಳ ಲವ್ ಮತ್ತು ಕ್ರೈಮ್ ಸ್ಟೋರಿಯಿದು.


ಆಕೆ ಪ್ರತಿಮಾ.ಅಜೆಕಾರಿನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದವಳಿಗೆ ಆಗೆಲ್ಲಾ ರೀಲ್ಸ್ ಮಾಡುತ್ತಾ ಫೇಮಸ್ಸಾಗುವ ಹುಚ್ಚು.ಅದರಲ್ಲಾಕೆ ಯಶಸ್ವಿಯೂ ಆಗಿದ್ದಳು.
ಆಕೆಯ ರೀಲ್ಸ್ ಹೆಚ್ಚಾಗುತ್ತಿದ್ದಂತೆಯೇ ಕಾರ್ಕಳ ಸಮೀಪದ ಹಿರ್ಗಾನದ ಹೊಟೆಲ್ ಉದ್ಯಮಿ ದಿಲೀಪ್ ಹೆಗ್ಡೆ ಎಂಬಾತನಿಗೆ ಆಕೆಯ ಮೇಲೆ ಅದೇನೋ ಹುಚ್ಚು ಶುರುವಾಗುತ್ತದೆ.ಕ್ರೈಮ್ ಸ್ಟೋರಿ ಸ್ಟಾರ್ಟಾಗೋದೇ ಅಲ್ಲಿಂದ.
ಹಾಗಂತ ಆಕೆ ಎಯ್ಟೀನ್,ಟ್ವೆಂಟಿ ಅಥವಾ ಅದರ ಆಸುಪಾಸಿನ ಆಂಟಿಯೇನಲ್ಲ. ದೊಂಡೇರಂಗಡಿಯವಳಾಗಿರುವ ಆಕೆಯನ್ನು ಅಜೆಕಾರು ದೆಪ್ಪುತ್ತೆಯ ಬಾಲಕೃಷ್ಣ ಪೂಜಾರಿಯವರನ್ನು ಕೆಲವರ್ಷಗಳ ಹಿಂದೆ ಮದುವೆಯಾಗಿದ್ದರು.
ಪತಿ-ಪತ್ನಿ ಚೆನ್ನಾಗಿಯೇ ಇದ್ದರು.ಸಾಧು ಸ್ವಭಾವದವರಾಗಿದ್ದ ಬಾಲಕೃಷ್ಣ ಪೂಜಾರಿ ಆಕೆಯ ರೀಲ್ಸ್ ಹುಚ್ಚಿಗೆ ವಿರೋಧ ಮಾಡಿರಲಿಲ್ಲ, ಯಾರೇನಾದರೂ ಹೇಳುತ್ತಾರೆಂದು ತಲೆಕೆಡಿಸಿಕೊಂಡಿರಲಿಲ್ಲ.ಪತ್ನಿಯ ರೀಲ್ಸ್ ಗೆ ಸಪೋರ್ಟ್ ಮಾಡುತ್ತಿದ್ದ ಮನುಷ್ಯನಾತ.ಪತ್ನಿಯ ಮೇಲೆ ಯಾವುದೇ ಡೌಟು ಮಾಡದೆ ಅಪಾರವಾಗಿ ಪ್ರೀತಿಸುತ್ತಿದ್ದವರು.
ಆದರೆ ತನ್ನೆಲ್ಲಾ ವಿಶ್ವಾಸ,ಪ್ರೀತಿ,ನಂಬಿಕೆ ಎಲ್ಲವೂ ತಿರುಗಿಬಿದ್ದು ತಾನು ಅಪಾರವಾಗಿ ಪ್ರೀತಿಸುತ್ತಿದ್ದವಳಿಂದಲೇ ಕೊಲೆಯಾಗುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಕ್ಕಿಲ್ಲ.
ಆಕೆಯ ರೀಲ್ಸ್ ಗೆ ಫ್ಯಾನ್ ಆಗಿದ್ದ ದಿಲೀಪ್ ಹೆಗ್ಡೆ ಪ್ರತಿಮಾಳಿಗೆ ಹತ್ತಿರವಾಗುತ್ತಾನೆ.ಪರಿಚಯ ಪ್ರೇಮಕ್ಕೆ ತಿರುಗುತ್ತದೆ.ಇಬ್ಬರೂ ಪ್ರೇಮಿಗಳಾಗುತ್ತಾರೆ.ಸಹಜವಾಗಿಯೇ ಗಂಡ ವೈರಿಯಾಗುತ್ತಾನೆ!
ಈ ವಿಷಯ ಬಾಲಕೃಷ್ಣ ಪೂಜಾರಿ ಅವರಿಗೆ ಗೊತ್ತಾಗಿ ತಮ್ಮ ಅಕ್ರಮ ಸಂಬಂಧಕ್ಕೆ ಆತ ಅಡ್ಡಿಯಾಗುತ್ತಾನೋ ಎಂದು ಆತನನ್ನು ಫಿನಿಶ್ ಮಾಡುವ ಪ್ಲಾನ್ ಹಾಕುತ್ತಾರೆ.
ಕೆಲವೊಂದು ವಿಷ ಪದಾರ್ಥ ಹಾಕಿ ಅವರ ಆರೋಗ್ಯ ಕೆಡಿಸುವ ಸಂಚು ರೂಪಿಸುತ್ತಾರೆ.ಹಂತ ಹಂತವಾಗಿಯೇ ಅವರನ್ನು ಮುಗಿಸಲು ತೀರ್ಮಾನಿಸಿದ್ದರೆನ್ನಲಾಗಿದೆ.ಆದರೆ ಬಾಲಕೃಷ್ಣ ಪೂಜಾರಿಯವರ ಆರೋಗ್ಯ ಕ್ಷೀಣಿಸತೊಡಗಿದಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನೂ ಕೊಡಿಸುತ್ತಾರೆ.
ಅದು 2024 ರ ಅಕ್ಟೋಬರ್ 20. ಪ್ರತಿಮಾ ತನ್ನ ಪ್ರಿಯಕರ ದಿಲೀಪನನ್ನು ದೆಪ್ಪುತ್ತೆಯ ಮನೆಗೆ ಮಧ್ಯರಾತ್ರಿ ಬರಲು ಹೇಳಿ ಅವರಿಬ್ಬರೂ ಸೇರಿಕೊಂಡು ಬಾಲಕೃಷ್ಣ ಪೂಜಾರಿಯವರನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆನ್ನುವುದು ಆರೋಪ.
ಘಟನೆಯಾದ ಮರುದಿನ ತನ್ನ ಗಂಡ ಮೃತಪಟ್ಟಿದ್ದಾರೆಂದು ಕುಟುಂಬ ಸದಸ್ಯರೆದುರು ಅಳುವ ಸೀನನ್ನೂ ಮಾಡಿದ್ದಳು.ಆದರೆ ಈ ಸೀನು ಫಲ ಕೊಡಲಿಲ್ಲ.ಕೆಲವೇ ದಿನಗಳಲ್ಲಿ ಅಜೆಕಾರು ಪೊಲೀಸರು ದಿಲೀಪ್ ಹೆಗ್ಡೆಯ ಹೆಗಲಿಗೆ ಕೈಹಾಕಿ ಎಳ್ಕೊಂಡು ಹೋಗಿ ವಿಚಾರಿಸುತ್ತಾರೆ.ಪ್ರತಿಮಾಳ ನಾಟಕವನ್ನು ಕ್ಯಾರ್ ಮಾಡದ ಪೊಲೀಸರು ಠಾಣೆಗೆ ಕರೆದೊಯ್ದು ಪ್ರೇಮಿಗಳಿಬ್ಬರನ್ನೂ ಠಾಣೆಯಲ್ಲಿ ವಿಚಾರಿಸಿದಾಗ ತಮ್ಮ ಲವ್ ಸ್ಟೋರಿ ಮತ್ತು ಬಾಲಕೃಷ್ಣ ಪೂಜಾರಿಯವರ ಕೊಲೆಯ ಕುರಿತು ಬಾಯಿ ಬಿಡುತ್ತಾರೆ. ಇಬ್ಬರಿಗೂ ಜೈಲಾಗಿತ್ತು.
ಈ ಪ್ರಕರಣ ನಡೆದು ಅಕ್ಟೋಬರ್ 20 ಕ್ಕೆ ಭರ್ತಿ ಎರಡು ವರ್ಷ.ಪ್ರಕರಣ ನ್ಯಾಯಾಲಯದಲ್ಲಿದೆ.ಆದರೆ ಅಂತಿಮ ತೀರ್ಪು ಹೊರಬಿದ್ದಿಲ್ಲ.
ಬಾಲಕೃಷ್ಣ ಪೂಜಾರಿ ಅವರ ತಂದೆ ಸಂಜೀವ ಪೂಜಾರಿ ಮತ್ತು ತಾಯಿ ಲೀಲಾ ಅವರು ತಮ್ಮ ಮಗನನ್ನು ಕೊಂದ ಪಾಪಿಗಳಿಗೆ ಶಿಕ್ಷೆಯಾಗಲೇಬೇಕೆಂದು ಆಗ್ರಹಿಸುತ್ತಾರೆ.ಎಲ್ಲರ ಆಗ್ರಹವೂ ಅದೇ ಆಗಿದೆ.ಪ್ರೇಮ-ಕಾಮದಾಸೆಗೆ ಅಮಾಯಕ ಜೀವವೊಂದನ್ನು ಬಲಿ ಪಡೆದಿರುವ ಈ ಪಾಪಿಜೋಡಿಗೆ ಶಿಕ್ಷೆಯಾಗಲೇಬೇಕು.












