ಪಾಲಡ್ಕದಲ್ಲಿ ವಿದ್ಯುತ್ ಶಾಕ್ ಆಗಿ ತಾಯಿ ಮಗ ಮೃತ್ಯು

Picture of Namma Bedra

Namma Bedra

Bureau Report

ಬಟ್ಟೆ ಒಣಗಲು ಹಾಕುವ ವೇಳೆ ವಿದ್ಯುತ್ ಶಾಕ್ ಆಗಿ ತಾಯಿ ಮತ್ತು ಮಗ ಮೃತಪಟ್ಟ ಘಟನೆ ಪಾಲಡ್ಕದ ವರ್ಣಬೆಟ್ಟು ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.


ವರ್ಣಬೆಟ್ಟುವಿನ ಮರ್ಸಿ ಮಸ್ಕರೇನಸ್ ಮತ್ತು ಅವರ ಮಗ ಶಾನ್ ಮಸ್ಕರೇನಸ್ ಮೃತಪಟ್ಟವರು.
‌‌‌ ಶಾನ್ ಮಸ್ಕರೇನಸ್ ಅವರು ಬೆಳಿಗ್ಗೆ ಬಟ್ಟೆ ಒಣಗಲು ಹಾಕಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮಗನನ್ನು ಬಿಡಿಸಲು ಹೋದ ತಾಯಿಗೂ ವಿದ್ಯುತ್ ಶಾಕ್ ಆಗಿ ಇಬ್ಬರೂ ಮೃತಪಟ್ಟಿದ್ದಾರೆ.
ಶಾನ್ ಮೂಡುಬಿದಿರೆ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಮಿತ್ತಬೈಲು ವಾಸುದೇವ ನಾಯಕ್, ಗಣೇಶ್ ಶೆಟ್ಟಿ,ಪ್ರವೀಣ್ ಸಿಕ್ವೇರಾ ಮುಂತಾದವರು ಭೇಟಿ ನೀಡಿದ್ದು ಮೆಸ್ಕಾಂ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top