ಮೂಡುಬಿದಿರೆ ನಾಗರಕಟ್ಟೆ ಬಿದಿರುಮನೆಯ ಜಗನ್ನಾಥ ಶೆಟ್ಟಿ (70) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಜಗ್ಗು ಶೆಟ್ಟಿ ಎಂದೇ ಖ್ಯಾತರಾಗಿದ್ದ ಅವರು ಕೆಲ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.
ಕಳೆದ ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಅವರೊಂದಿಗೆ ಹಾಗೂ ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್ ಅವರ ಆತ್ಮೀಯರಾಗಿ ಅವರ ಕಂಬಳ ತಂಡದಲ್ಲಿ ಸಹಕರಿಸುತ್ತಿದ್ದರು.
‘ಕಂಬಳ ಕ್ಷೇತ್ರದಲ್ಲಿ ನಮ್ಮ ತಂಡವು ಇಷ್ಟು ಹೆಸರು ಗಳಿಸಬೇಕಾದರೆ ಅದರ ಹಿಂದೆ ಜಗ್ಗಣ್ಣನ ಪಾತ್ರ ದೊಡ್ಡದಿತ್ತು’ ಎಂದು ಚಂದ್ರಹಾಸ ಸನಿಲ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ವಿತರಕ ಒಂಟಿಕಟ್ಟೆ ಪ್ರಭಾಕರ ಕುಲಾಲ್ ಹಾಗೂ ಹಲವಾರು ಮಂದಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.












