ಶಿರ್ತಾಡಿಯ ಯುವಕ ಹೃದಯಾಘಾತದಿಂದ ನಿಧನ

Picture of Namma Bedra

Namma Bedra

Bureau Report

ಕಳೆದ ಮೂರು ತಿಂಗಳ ಹಿಂದೆ ಅಳಿಯೂರಿನಲ್ಲಿ ನಡೆದಿದ್ದ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ವಾಪಾಸಾಗಿದ್ದ ಯುವಕನೋರ್ವ ಹೃದಯಾಘಾತದಿಂದ ನಿಧನಹೊಂದಿದ್ದಾನೆ.
ಶಿರ್ತಾಡಿ ಮಕ್ಕಿಯ ನಿವಾಸಿ ಚೇತನ್ (30) ಮೃತಪಟ್ಟ ಯುವಕ.
ಚೇತನ್ ವೃತ್ತಿಯಲ್ಲಿ ಚಾಲಕನಾಗಿದ್ದ ಚೇತನ್ ಅವರು ಅಪಘಾತದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸಾಗಿದ್ದರು.
ಬದಲಿ ಚಾಲಕನಾಗಿ ದುಡಿಯುತ್ತಿದ್ದ ಅವರು ಇತ್ತೀಚಿನಿಂದ ಎಲೆಕ್ಟ್ರಿಕಲ್ ವೃತ್ತಿ ಮಾಡುತ್ತಿದ್ದರು.
ಭಾನುವಾರ ಕೆಲಸ ಮುಗಿಸಿಕೊಂಡು ಬಂದು ಮಲಗಿದ್ದಾತ ಬೆಳಿಗ್ಗೆ ಎದ್ದೇಳಿರಲಿಲ್ಲ. ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top