ಬಿಜೆಪಿಯವರ ‘ಜನಾಕ್ರೋಶ’ದ ಬಗ್ಗೆಯೇ ಜನರ ಆಕ್ರೋಶ: ಅರುಣ್ ಕುಮಾರ್ ಶೆಟ್ಟಿ

Picture of Namma Bedra

Namma Bedra

Bureau Report

‘ಬಿಜೆಪಿಯವರು ಜನರ ದಾರಿ ತಪ್ಪಿಸಲು ಅಲ್ಲಲ್ಲಿ ಜನಾಕ್ರೋಶ ಪ್ರತಿಭಟನೆ ಮಾಡುತ್ತಿದ್ದು ಈ ಪ್ರತಿಭಟನೆ ಜನರಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ’ ಎಂದು ಮೂಡುಬಿದಿರೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಹೇಳಿದ್ದಾರೆ.


ಪಂಚಗ್ಯಾರಂಟಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಾಜಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಪಂಚಗ್ಯಾರಂಟಿ ಯೋಜನೆ ಮುಖಾಂತರ ಬಡಜನರ ಕಣ್ಣೀರು ಒರೆಸುವ ಕೆಲಸ ಇಂದು ದೇಶದಾದ್ಯಂತ ಮನೆಮಾತಾಗಿದೆ,ಮೂಡುಬಿದಿರೆ ತಾಲೂಕಿನಲ್ಲಿ 19,657 ಮಂದಿ ಗೃಹಲಕ್ಷ್ಮಿ ಫಲಾನುಭವಿಗಳು,ಅನ್ನಭಾಗ್ಯ ಯೋಜನೆಯಡಿ 22,901 ಪಡಿತರ ಚೀಟಿ ಇದ್ದು 93,461 ಮಂದಿ ಫಲಾನುಭವಿಗಳಿದ್ದಾರೆ,ಗೃಹಜ್ಯೋತಿಯಲ್ಲಿ 28,725 ಮನೆಗಳು ಉಚಿತ ವಿದ್ಯುತನ್ನು ಪಡೆಯುತ್ತಿದೆ,322 ಮಂದಿ ಯುವನಿಧಿಯ ಫಲಾನುಭವಿಗಳಿದ್ದಾರೆ,ಶಕ್ತಿ ಯೋಜನೆಯಲ್ಲಿ ಸರಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವಿದ್ದು ಇದರ ಪ್ರಯೋಜನವನ್ನೂ ಈಭಾಗದ ಮಹಿಳೆಯರು ಪಡೆಯುತ್ತಿದ್ದಾರೆ ಎಂದ ಅವರು ಗೃಹಲಕ್ಷ್ಮಿ ಯೋಜನೆಯಡಿ ಮೂಡುಬಿದಿರೆ ತಾಲೂಕಿಗೆ ಇಷ್ಟರವರೆಗೆ 114 ಕೋಟಿ ರೂ.ಮಹಿಳೆಯರ ಖಾತೆಗೆ ಜಮೆಯಾಗಿದೆ,ಒಂದು ಕಂತಿಗೆ ಸುಮಾರು ನಾಲ್ಕು ಕೋಟಿಯಷ್ಟು ಹಣ ಮೂಡುಬಿದಿರೆ ತಾಲೂಕಿಗೆ ಬರುತ್ತಿದೆ, 33 ಕಂತುಗಳಲ್ಲಿ ಹಣ ಇಷ್ಟರವರೆಗೆ ಬಂದಿದ್ದು 34, 35 ಮತ್ತು 36 ನೇ ಕಂತಿನ ಹಣ ದೀಪಾವಳಿಯ ಬಹುಮಾನ ರೂಪದಲ್ಲಿ ಈ ವಾರ ಜಮೆಯಾಗಲಿದೆ ಎಂದು ಮಾಹಿತಿ ನೀಡಿದರು.


ಕರ್ನಾಟಕ ರಾಜ್ಯದ ಮಹಿಳೆಯರು ಸರಕಾರದ ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಮೂಲಕ ರಾಜ್ಯದಾದ್ಯಂತ ಪ್ರಯಾಣ ಬೆಳೆಸಿ ಕುಷಿಪಟ್ಟಿದ್ದಾರೆ,ಮಕ್ಕಳ ಶಾಲಾ ಶುಲ್ಕ ಕಟ್ಟಲು,ಔಷಧೋಪಚಾರಕ್ಕೆ ಮಹಿಳೆಯರು ತಮಗೆ ಬರುವ ಗೃಹಲಕ್ಷ್ಮಿ ಯೋಜನೆಯ ಹಷವನ್ನು ಬಳಸುತ್ತಿದ್ದಾರೆ, ಪಂಚಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನರಿಂದು ನೆಮ್ಮದಿಯ ಜೀವನ ಸಾಗಿಸುತ್ತಿರಬೇಕಾದರೆ ಬಿಜೆಪಿಯವರು ಮಾತ್ರ ಜನರ ದಾರಿ ತಪ್ಪಿಸಿ ಪಂಚಗ್ಯಾರಂಟಿ ಉಓಜನೆಯನ್ನು ವಿರೋಧಿಸುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಅಭಿವೃದ್ಧಿ ಆಗುತ್ತಿದ್ದರೂ ಮೊದಲಿನಿಂದಲೂ ಪಂಚಗ್ಯಾರಂಟಿಯನ್ನು ವಿರೋಧಿಸುತ್ತಾ ಬಂದಿರುವ ಬಿಜೆಪಿ ‘ಅಭಿವೃದ್ಧಿಗೆ ಹಣ ಬರುತ್ತಿಲ್ಲ,ಪಂಚಗ್ಯಾರಂಟಿಯನ್ನು ನಿಲ್ಲಿಸಿ’ ಎಂದು ಅಲ್ಲಲ್ಲಿ ಜನಾಕ್ರೋಶ ಪ್ರತಿಭಟನೆ ನಡೆಸುತ್ತಿದೆ,ಅರ್ಥವೇ ಇಲ್ಲದ ಬಿಜೆಪಿಯವರ ಈ ಜನಾಕ್ರೋಶಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆಂದು ಅವರು ಹೇಳಿದರು.
ಪೆಟ್ರೋಲ್ ಬೆಲೆ ಲೀಟರ್ ಗೆ 112 ರೂ.ಆಗಿದೆ, ಗ್ಯಾಸ್ ಗೆ ಒಂದು ಸಾವಿರ ಆಗಿದೆ, ರೈತರ ರಸಗೊಬ್ಬರದ ಬೆಲೆಯೇರಿಕೆಯಾಗಿದೆ,ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿಲ್ಲ,ಆದರೂ ವಿಜಯ್ ಮಲ್ಯ, ಅದಾನಿ,ಅಂಬಾನಿ, ನೀರವ್ ಮೋದಿ,ಲಲಿತ್ ಮೋದಿ ಮುಂತಾದ ಕಾರ್ಪೊರೇಟರ್ ಗಳ ಲಕ್ಷಾಂತರ ಕೋಟಿ ರೂ.ಸಾಲ ಮನ್ನಾ ಮಾಡಿದೆ,ಕೇಂದ್ರೀಕೃತ ಬ್ಯಾಂಕುಗಳಲ್ಲಿ ಉತ್ತರಭಾರತದವರೇ ಕೆಲಸಕ್ಕಿದ್ದು ನಮ್ಮೂರಿನ ಯುವಕ ಯುವತಿಯರಿಗೆ ಕೆಲಸವಿಲ್ಲ, ಬಿಜೆಪಿಯವರಿಗೆ ಜನರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಇದೆಲ್ಲದರ ವಿರುದ್ಧ ಜನಾಕ್ರೋಶ ಪ್ರತಿಭಟನೆ ಮಾಡಬೇಕೇ ಹೊರತು ಜನರ ನೆಮ್ಮದಿ
ಮತ್ತು ರಾಜ್ಯದ ಅಭಿವೃದ್ಧಿ ಮಾಡುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಅಲ್ಲ ಎಂದು ಅರುಣ್ ಕುಮಾರ್ ಶೆಟ್ಟಿ ಹೇಳಿದರು.
ಗ್ಯಾರಂಟಿ ಯೋಜನೆಯ ಸದಸ್ಯರಾದ ಪ್ರಭಾಕರ ದರೆಗುಡ್ಡೆ,ಶಿವಾನಂದ ಪಾಂಡ್ರು,ಶೌಕತ್ ಬೆಳುವಾಯಿ, ಶಕುಂತಲಾ ಹರೀಶ್, ರಜನಿ ಹಾಗೂ ಬಾಲಕೃಷ್ಣ ದೇವಾಡಿಗ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top