ಮೂಡುಬಿದಿರೆಯಲ್ಲಿದು ಮೊದಲ ಬಾರಿಗೆ ನಿರ್ಮಾಣಗೊಳ್ಳಲಿರುವ ಆಧುನಿಕ ವ್ಯವಸ್ಥೆಯ ಹೊಸ ಯೋಜನೆ.ಹಾಗಂತ ಇದು ಅನಾಥಾಶ್ರಮವಲ್ಲ. ಹಿರಿಯರು ಬಯಸಿದ್ದಲ್ಲಿ ಆರಾಮದಾಯಕ ಬದುಕು ರೂಪಿಸಲೊಂದು ಉತ್ತಮ ವ್ಯವಸ್ಥೆ ಹಾಗೂ ಸ್ವರ್ಣಾವಕಾಶ.
ಹೆಸರೇ ‘ ಸ್ವರ್ಣಧಾಮ’. ಮಂಗಳೂರಿನ ಗೃಹಲಕ್ಷ್ಮಿ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ.ಈ ಹೊಸ ಯೋಜನೆಯನ್ನು ಈ ಭಾಗದಲ್ಲಿ ಪರಿಚಯಿಸಲು ಮುಂದೆ ಬಂದಿದೆ.
ಬೆಳುವಾಯಿ ಸಮೀಪದ ಕೆಸರ್ಗದ್ದೆಯ ಮುರ ಎಂಬ ಪ್ರಶಾಂತ ವಾತಾವರಣದ ಪರಿಸರದಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಈ ನೂತನ ಬಡಾವಣೆ ನಿರ್ಮಾಣಗೊಳ್ಳಲಿದೆ.
ಈ ಯೋಜನೆಯಲ್ಲಿ 4 ರಿಂದ 10 ಸೆನ್ಸ್ ಅಥವಾ ಹೆಚ್ಚಿನ ನಿವೇಶನಗಳು ಹಾಗೂ 1,2, 3 ಬಿಹೆಚ್ಕೆ ಮನೆಗಳ ಆಯ್ಕೆಯಿದೆ.ಆಸಕ್ತ ಹಿರಿಯರು ಖರೀದಿಸಿ ತಮ್ಮ ನಿವೃತ್ತ ಜೀವನವನ್ನು ಈ ಸ್ವರ್ಣಧಾಮದಲ್ಲಿ ಕರೆಯಬಹುದು.

ದಿನದ 24 ಗಂಟೆ ನೀರಿನ ವ್ಯವಸ್ಥೆ, ಯೋಗ,ಧ್ಯಾನ,ಆರೋಗ್ಯ ತಪಾಸಣೆ, ವೈದ್ಯಕೀಯ ನೆರವು,ಉತ್ತಮ ಆಹಾರದ ವ್ಯವಸ್ಥೆ, ಉದ್ಯಾನವನ,ವಾಕಿಂಗ್ ಟ್ರಾಕ್,ಒಳಾಂಗಣ ಆಟಗಳು, ಸಿಸಿಟಿವಿ, ಇಂಟರ್ನೆಟ್, ಪ್ರವಾಸ ಹಾಗೂ ಇನ್ನಿತರ ವ್ಯವಸ್ಥೆಗಳು ಈ ಸ್ವರ್ಣಧಾಮದಲ್ಲಿರಲಿದೆ ಎಂದು ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಶರ್ಮ ಎನ್.ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 9 ಗಂಟೆಗೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ‘ ಸ್ವರ್ಣಧಾಮ’ ವಸತಿ ಟೌನ್ ಶಿಪ್ ನ ಮುಖ್ಯದ್ವಾರ ಹಾಗೂ ಮಾದರಿ ಮನೆಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದು ಶಾಸಕ ಉಮಾನಾಥ ಕೋಟ್ಯಾನ್ ಅವರು ಕಂಪೌಂಡ್ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಹಾಗೂ ಬೆಳುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಸಂಸ್ಥೆಯ ಗೌರವ ಸಲಹೆಗಾರ ನೆರೋಳು ಈಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಮಾರ್ಕೆಟಿಂಗ್ ವಿಭಾಗದ ಜೀವನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



