ಬೆದ್ರದ ನದೀಮ್ ಅವರಿಗೆ ‘ಶಂಕರ್ ನಾಗ್ ಅವಾರ್ಡ್’

Picture of Namma Bedra

Namma Bedra

Bureau Report

‘ಬಿಸಿಲೂರ ಪೋಸ್ಟ್’ ದಿನಪತ್ರಿಕೆಯ ವಾರ್ಷಿಕೋತ್ಸವದ ಅಂಗವಾಗಿ ನೀಡಲಾಗುವ 2026 ರ ‘ಶಂಕರ್ ನಾಗ್ ಅವಾರ್ಡ್’ ಗೆ ಮೂಡುಬಿದಿರೆಯ ಕರಾಟೆ ಶಿಕ್ಷಕ,ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮುಹಮ್ಮದ್ ನದೀಮ್ ಅವರು ಆಯ್ಕೆಯಾಗಿದ್ದಾರೆ.
ನದೀಮ್ ಅವರು ಮೂಡುಬಿದಿರೆಯಲ್ಲಿ ಕಳೆದ ಹಲವು ವರ್ಷಗಳಿಂದ ಕರಾಟೆ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆಯುವಂತೆ ರೂಪಿಸಿದ್ದಾರೆ.
ಮೂಡುಬಿದಿರೆಯಲ್ಲಿ ಹಲವು ಕರಾಟೆ ಸ್ಪರ್ದೆಗಳನ್ನು ಹಮ್ಮಿಕೊಂಡು ಸಾಧಕರನ್ನು ಗುರುತಿಸಿ ಗೌರವಿಸಿದ್ದಾರೆ.
ರಾಜ್ಯ ಕರಾಟೆ ಅಸೋಸಿಯೇಷನ್ ನ ಅಧ್ಯಕ್ಷರಾಗಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ.‌ಅವರ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ಸಮಿತಿಯು ಅವರನ್ನು ಆಯ್ಕೆ ಮಾಡಿದ್ದು ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top