ಸಾಮಾಜಿಕ ಸೇವೆಗಾಗಿ ಪೆರಾಡಿ ಮೂಲದವರಾಗಿರುವ ಪ್ರಸ್ತುತ ಮೂಡುಬಿದಿರೆಯ ನಿವಾಸಿ ವಿನೋಭ್ ಜೈನ್ ಅವರನ್ನು ಮೂಡುಬಿದಿರೆ ಎಂ.ಸಿ.ಎಸ್.ಬ್ಯಾಂಕ್ ನಲ್ಲಿ ನಡೆಯುತ್ತಿರುವ 73 ನೇ ಅಖಿಲಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಿನೋಭ್ ಜೈನ್ ಅವರ ಪ್ರಚಾರ ರಹಿತ ಸಾಮಾಜಿಕ ಸೇವೆಗಳನ್ನು ಗುರುತಿಸಿ ಈ ಸನ್ಮಾನ ನಡೆಯಿತು.
ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್,ಉದ್ಯಮಿ ಕೆ.ಶ್ರೀಪತಿ ಭಟ್,ಪುಂಡಿಕಾಯಿ ಗಣಪಯ್ಯ ಭಟ್ ಸಹಿತ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



