ಮೂಡುಬಿದಿರೆಯಲ್ಲಿ ಖ್ಯಾತ ಗುಜರಿ ಅಂಗಡಿ ಮಾಲಕರಾಗಿದ್ದ ತೋಡಾರು ಹಿದಾಯತ್ ನಗರದ ನಿವಾಸಿ ನಜ್ಜಿ ( ನಝೀರ್- 58) ಅವರು ಇಂದು ನಿಧನರಾದರು.
ಮೂಡುಬಿದಿರೆಯಲ್ಲಿ ಕೆಲ ವರ್ಷಗಳಿಂದ ಗುಜರಿ ಅಂಗಡಿ ಮಾಲಕರಾಗಿದ್ದ ಅವರ ವಾಹನವು ಕಳೆದೆರಡು ತಿಂಗಳ ಹಿಂದೆ ಪಲ್ಟಿಯಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಆಸ್ಪತ್ರೆಯಿಂದ ಮನೆಯಲ್ಲೇ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಮೃತರ ಸಹೋದರಿ ಒಂದು ವಾರದ ಹಿಂದಷ್ಟೇ ನಿಧನಹೊಂದಿದ್ದರು.
ಮೃತರು ಪತ್ನಿ, ಐವರು ಪುತ್ರರು,ಓರ್ವ ಪುತ್ರಿಯನ್ನು ಅಗಲಿದ್ದಾರೆ.



