ತಾ.ಪಂ. ಮಾಜಿ ಉಪಾಧ್ಯಕ್ಷ ಸಂತೋಷ್ ಮಾಡಿನಿಂದ ಬಿದ್ದು ಮೃತ್ಯು

Picture of Namma Bedra

Namma Bedra

Bureau Report

ಮೂಡುಬಿದಿರೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ,ಬೆಳುವಾಯಿ ಕ್ಷೇತ್ರದ ತಾ.ಪಂ.ಸದಸ್ಯರಾಗಿದ್ದ ಸಂತೋಷ್ ಅವರು ಮಂಗಳೂರಿನಲ್ಲಿಂದು ಮನೆಯ ಮಾಡಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದ ಅವರು ಇಂದು ಬೇರೆ ಕಡೆಗೆ ಬದಲಿ ಕೆಲಸಗಾರನಾಗಿ ಹೋಗಿದ್ದರೆನ್ನಲಾಗಿದೆ.
‌ ಮನೆಯ ಮಾಡಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಆಯ ತಪ್ಪಿ ಕೆಳಕ್ಕೆ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಿಲ್ಲವೆಂದು ತಿಳಿದು ಬಂದಿದೆ.
ಬೆಳುವಾಯಿ ನಿವಾಸಿಯಾಗಿರುವ ಸಂತೋಷ್ ವಿವಾಹಿತರಾಗಿದ್ದು ಒಂದು ಸಣ್ಣ ಮಗುವಿದೆಯೆಂದು ತಿಳಿದು ಬಂದಿದೆ.
ಹೊಸದಾಗಿ ರಚನೆಯಾಗಿದ್ದ ಮೂಡುಬಿದಿರೆ ತಾಲೂಕು ಪಂಚಾಯತ್ ನ ಮೊದಲ ಅವಧಿಯ ಉಪಾಧ್ಯಕ್ಷರಾಗಿದ್ದರು.
ರೇಖಾ ಸಾಲ್ಯಾನ್ ಅವರು ಮೊದಲ ಅವಧಿಯ ಅಧ್ಯಕ್ಷರಾಗಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top