ಇದು ದ.ಕ.ಜಿಲ್ಲೆಯಲ್ಲಿಯೇ ಮೊದಲು. ಹನೀಫ್ ಅವರ ಮಾಲಕತ್ವದ ‘ ಬೆದ್ರ ಕೆಫೆ’ ಈ ಪ್ರಯತ್ನಕ್ಕೆ ಕೈಹಾಕಿದ್ದು ಮುಂದಿನ ವಾರದಿಂದ ಈ ಫುಡ್ ಟ್ರಕ್ ಆರ್ಡರ್ ಮಾಡಿದ ಸಭೆ, ಸಮಾರಂಭಗಳ ಜಾಗದ ಮುಂದೆ ಬಂದು ನಿಲ್ಲುತ್ತದೆ.
ಇದರ ವಿಶೇಷತೆಗಳು:
ಸುಮಾರು ಲಕ್ಷ ಮೊತ್ತದಲ್ಲಿ ಖರೀದಿಸಿದ ಹೊಸ ಟ್ರಕ್ ನಲ್ಲಿ ಗ್ರಾಹಕರಿಗೆ ಬೇಕಾದ ಊಟ,ತಿಂಡಿ,ಪಾನೀಯಗಳನ್ನು ಸ್ಥಳದಲ್ಲೇ ತಯಾರಿಸಿಕೊಡಲಿದೆ.
ಸುಮಾರು 300 ಜನರಿಗಾಗುವಷ್ಟು ವ್ಯವಸ್ಥೆಗಳನ್ನು ಈ ಟ್ರಕ್ ನಲ್ಲಿ ತಯಾರಿಸಕೊಡಲಾಗುವುದು.
ಬರ್ತ್ ಡೇ ಪಾರ್ಟಿ, ಸಣ್ಣಮಟ್ಟಿನ ಸಭೆ ಸಮಾರಂಭಗಳಿಗೆ ಈ ಫುಡ್ ಟ್ರಕ್ ಗೆ ಆರ್ಡರ್ ಮಾಡಿದರೆ ಸಮಯಕ್ಕೆ ಸರಿಯಾಗಿ ಬಂದು ಎಲ್ಲ ವ್ಯವಸ್ಥೆ ಮಾಡಿಕೊಡುತ್ತದೆ.
ಬಿರಿಯಾನಿ, ಚಿಕನ್ ಐಟಮ್ಸ್, ಸ್ನಾಕ್ಸ್, ಕೋಲ್ಡ್ ಡ್ರಿಂಕ್ಸ್ …ಹೀಗೆ ಏನೆಲ್ಲಾ ಬೇಕಾ ಅದನ್ನು ಸ್ಥಳದಲ್ಲೇ ತಯಾರಿಸಿಕೊಡುವ ವ್ಯವಸ್ಥೆಯಿದು.
ಸಾರ್ವಜನಿಕರ ಅಭಿರುಚಿಗೆ ತಕ್ಕಂತೆ ವ್ಯವಸ್ಥೆ ಮಾಡಿ ಕೊಡಲಾಗುವುದು, ಇದು ಮೂಡುಬಿದಿರೆ ಮಾತ್ರವಲ್ಲ,ಇಡೀ ಜಿಲ್ಲೆಯಲ್ಲೇ ಪ್ರಥಮವೆಂದು ಬೆದ್ರ ಕೆಫೆಯ ಮಾಲಕ ಹನೀಫ್ ಅವರು ತಿಳಿಸಿದ್ದಾರೆ.
ಕಾರ್ಯಕ್ರಮಗಳಿಗೆ ಈ ಫುಡ್ ಟ್ರಕ್ ವ್ಯವಸ್ಥೆ ಬೇಕಾದರೆ ಹನೀಫ್ ( 9731508467) ಅವರನ್ನು ಸಂಪರ್ಕಿಸಬಹುದು.



