ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಡಿಸೆಂಬರ್ 29 ರಂದು ಮೂಡುಬಿದಿರೆಯಲ್ಲಿ ನಡೆಯಲಿರುವ 37 ನೇ ವಾರ್ಷಿಕ ಸಮಾವೇಶದ ಪೋಸ್ಟರನ್ನು ಮಾಜಿ ಮುಖ್ಯ ಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅವರು ಬಿಡುಗಡೆಗೊಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ,ಮಂಗಳೂರು ವಿ.ವಿ.ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ,ನ್ಯಾಯವಾದಿ ಪದ್ಮರಾಜ್ ಆರ್.ಪೂಜಾರಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಹಿರಿಯ ಸಾಹಿತಿ ಬಾಬು ಶಿವ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ,ವಿಶುಕುಮಾರ್ ದತ್ತಿ ನಿಧಿ ಸಂಚಾಲಕ ಸುರೇಶ ಪೂಜಾರಿ, ಪಣಂಬೂರು ಕುಳಾಯಿ ಘಟಕದ ಅಧ್ಯಕ್ಷೆ ಮನಿಷಾ ರೂಪೇಶ್,ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಯುವವಾಹಿನಿ ಸಾಮಾಜಿಕ ಜಾಲತಾಣ ನಿರ್ದೇಶಕ ನವಾನಂದ,ಮೂಡುಬಿದಿರೆ ಯುವವಾಹಿನಿ ಉಪಾಧ್ಯಕ್ಷ ಪ್ರಭಾಕರ್ ಚಾಮುಂಡಿಬೆಟ್ಟ ಮತ್ತಿತರರು ಉಪಸ್ಥಿತರಿದ್ದರು.