ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘವು ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬರಕ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ( ಹುಡುಗ-ಹುಡುಗಿಯರ ವಿಭಾಗ) ಕುಮಿಟೆ ಹಾಗೂ ಕಟ ವಿಭಾಗದಲ್ಲಿ ಹಲವಾರು ಪದಕಗಳನ್ನು ಪಡೆಯುವ ಮೂಲಕ ಶಾಲೆಗೆ ‘ಉತ್ತಮ ಕರಾಟೆ ತಂಡ’ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹುಡುಗರ ವಿಭಾಗ:
ಮುಹಮ್ಮದ್ ಶೀಷ್ – ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕ, ಮುಹಮ್ಮದ್ ಅಲೀನ್ -ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕ, ಮುಹಮ್ಮದ್ ಶಝೀಲ್ -ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕ, ಹಝೀಮ್ ಇಬ್ರಾಹಿಂ ಹಫೀಝ್-ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿ ಪದಕ, ಸಯ್ಯದ್ ಅಬೂಝರ್ -ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕ, ಮುಹಮ್ಮದ್ ರಬಿ- ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕ, ಮುಹಮ್ಮದ್ ನಿಬಾನ್ -ಕಟ ವಿಭಾಗದಲ್ಲಿ ಕಂಚಿನ ಪದಕ, ಮಾಜಿದ್ ಅಬ್ದುಲ್ಲಾ – ಕಟ ವಿಭಾಗದಲ್ಲಿ ಕಂಚಿನ ಪದಕ, ಫಾಯಿಝ್ ಅಯ್ಯೆಬ್ ಉಳ್ಳಾಲ್ -ಕಟ ವಿಭಾಗದಲ್ಲಿ ಕಂಚಿನ ಪದಕ.
ಪದಕ ಪಡೆದ ವಿದ್ಯಾರ್ಥಿಗಳೆಲ್ಲಾ ಮೂಡುಬಿದಿರೆಯ ಶೊರಿನ್ ರಿಯು ಕರಾಟೆ ಅಸೋಸಿಯೇಷನ್ ನ ಮುಖ್ಯ ಶಿಕ್ಷಕ ರೆನ್ಷಿ ನದೀಮ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
