ಮೂಡುಬಿದಿರೆಯ ಅಲ್ ಬಿರ್ ಸ್ಕೂಲ್ ನ ಪ್ರಾರಂಭೋತ್ಸವವು ಇಲ್ಲಿನ ಅಜುಮ್ ಅಲ್ ಬಿರ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಜರುಗಿತು.
ಸಮಸ್ತ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ಅವರು ದುವಾ ನೆರವೇರಿಸಿ ಮಕ್ಕಳಿಗೆ ಅಕ್ಷರವನ್ನು ಬರೆಸುವ ಮೂಲಕ ಉದ್ಘಾಟಿಸಿದರು.
ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಅಬ್ದುಸ್ಸಲಾಮ್ ಬೂಟ್ ಬಝಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಟ್ರಸ್ಟ್ ಅಧ್ಯಕ್ಷರಾದ ಉಸ್ಮಾನ್ ಅಬ್ದುಲ್ಲಾ ಸೂರಿಂಜೆ, ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಾಲಿಕ್, ಸದಸ್ಯರಾದ ಮುಹಮ್ಮದ್ ಅಲ್ತಾಫ್ ಗಂಟಾಲ್ಕಟ್ಟೆ, ಅಬ್ದುಲ್ ರಝಾಕ್ ಸಚ್ಚರಿಪೇಟೆ,ಶಮೀವುಲ್ಲಾ ಅಳಿಯೂರು, ಮುಹಮ್ಮದ್ ಆರಿಫ್ ಬೆಳುವಾಯಿ, ಅಬ್ದುಲ್ ಹಮೀದ್ ಉಡುಪಿ, ಖಜಾಂಚಿ ಮುಹಮ್ಮದ್ ಇರ್ಫಾನ್, ಲಾಡಿ ಮಸೀದಿಯ ಖತೀಬರಾದ ಫಾಯಿಝ್ ಫೈಝಿ,ಅಲ್ ಬಿರ್ ಶಾಲೆಯ ಮುಖ್ಯ ಗುರುಗಳಾದ ಫೈಝಲ್ ಫೈಝಿ,ಪ್ರಾಂಶುಪಾಲರು,ಶಿಕ್ಷಕಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






