ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುಸ್ತಕ ವಿತರಣೆ

Picture of Namma Bedra

Namma Bedra

Bureau Report

ಮೂಡುಬಿದಿರೆ ಕ್ಷೇತ್ರದ ಶಾಸಕರಾಗಿ, ಕರ್ನಾಟಕ ಸರಕಾರದ ಸಚಿವರಾಗಿ ಸೇವೆ ಸಲ್ಲಿಸಿ ಸ್ವಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೊಸ ಛಾಪು ನೀಡಿದ್ದ ಮಾಜಿ ಸಚಿವ, ಮಾಜಿ ಶಾಸಕರೂ ಆದ ದಿ.ಕೆ.ಅಮರನಾಥ ಶೆಟ್ಟಿ ಅವರ ನೆನಪಿನಲ್ಲಿ ಪ್ರಾರಂಭಗೊಂಡಿರುವ ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀರ್ಕೆರೆ ಸ.ಹಿ.ಪ್ರಾ .ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು.


ಟ್ರಸ್ಟಿಗಳಾದ ಜಯಶ್ರೀ ಶೆಟ್ಟಿ, ಡಾ.ಅಮರಶ್ರೀ ಶೆಟ್ಟಿ ಹಾಗೂ ಆಶ್ರಿತಾ ಪಿ.ಶೆಟ್ಟಿ ಅವರು ಈ ಸಂದರ್ಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ‘ ಈ ಟ್ರಸ್ಟ್ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಯೋಜನೆಯನ್ನು ರೂಪಿಸಲಾಗಿದೆ’ ಎಂದರು.
ಮರಿಯಡ್ಕ ರಮೇಶ್ ಶೆಟ್ಟಿ, ತುಳುನಾಡು ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಮಕೃಷ್ಣ ಶೆಟ್ಟಿ, ಬಿ.ಎಸ್.ಜೆ.ಎಂ.ಅಧ್ಯಕ್ಷರಾದ ಎಂ.ಎ.ಎಸ್.ಆಸಿಫ್ ಇಕ್ಬಾಲ್,ಪಂಚಾಯತ್ ಸದಸ್ಯರಾದ ಜೆ.ಕೆ.ಹಸನಬ್ಬ,ಹರಿಪ್ರಸಾದ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಯಲಕ್ಷ್ಮಿ ಶೆಟ್ಟಿಗಾರ್,ನೇಮಿರಾಜ್ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top