ಬೆದ್ರದಲ್ಲಿ ಧರ್ಮಸ್ಥಳ ಭಕ್ತರ ಸಭೆ: ಬೃಹತ್ ಸಮಾವೇಶಕ್ಕೆ ಸಿದ್ಧತೆ

Picture of Namma Bedra

Namma Bedra

Bureau Report

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳಿಂದ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಭಕ್ತರು ಮೂಡುಬಿದಿರೆಯಲ್ಲಿ ಸಭೆ ನಡೆಸಿ ಧರ್ಮಸ್ಥಳ ಪರವಾಗಿ ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಿದ್ದಾರೆ.


ಮೂಡುಬಿದಿರೆಯ ಕನ್ನಡಭವನದಲ್ಲಿ ಇತ್ತೀಚೆಗೆ ಈ ಸಭೆ ನಡೆದಿದೆ.
ಡಾ.ಮೋಹನ ಆಳ್ವ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶಕ್ಕೆ ದಿನ ನಿಗದಿಪಡಿಸಲಾಗಿದೆ.
ಮಾಜಿ ಸಚಿವ ಕೆ.ಅಭಯಚಂದ್ರ,ಮಿಥುನ್ ರೈ,ಚೌಟರ ಅರಮನೆಯ ಕುಲದೀಪ್ ಎಂ, ಕೆ.ಶ್ರೀಪತಿ ಭಟ್, ಭಾಸ್ಕರ ಕೋಟ್ಯಾನ್, ಸುದರ್ಶನ ಎಂ, ಸುಚರಿತ ಶೆಟ್ಟಿ,ನಂದಕುಮಾರ್ ಕುಡ್ವ,ನಾರಾಯಣ ಪಿ.ಎಂ, ಜಗದೀಶ್ ಅಧಿಕಾರಿ,ಸುರೇಶ್ ಕೋಟ್ಯಾನ್, ಪಿ.ಕೆ.ರಾಜುಪೂಜಾರಿ,ಹೇಮರಾಜ್, ಕೊರಗಪ್ಪ,ಹರ್ಷವರ್ಧನ ಪಡಿವಾಳ್,ದಯಾನಂದ ಪೈ, ವಿವೇಕ್ ಆಳ್ವ,ಶ್ವೇತಾ ಜೈನ್ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top