ಎಸ್.ಕೆ.ಎಸ್.ಎಸ್.ಎಫ್. ಪಡ್ಡಂದಡ್ಕ ಶಾಖೆ ವತಿಯಿಂದ ನಿರ್ಮಾಣಗೊಂಡ ಮನೆಯ ಹಸ್ತಾಂತರ ಕಾರ್ಯಕ್ರಮವು ಶಾಖೆಯ ಅಧ್ಯಕ್ಷ ಕೆ.ಪಿ.ಬಶೀರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಸೀದಿ ಕಮಿಟಿಯ ಮಾಜಿ ಅಧ್ಯಕ್ಷ, ಉದ್ಯಮಿ ಯು.ಕೆ.ಮುಹಮ್ಮದ್ ಹಾಜಿ ಅವರು ನೂತನ ಮನೆಯ ಗೃಹಪ್ರವೇಶವನ್ನು ನೆರವೇರಿಸಿದರು.
ಮಸೀದಿ ಕಮಿಟಿಯ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಅವರು ಮನೆಯ ಕೀಯನ್ನು ಮುಸ್ತಫಾ ಅವರಿಗೆ ಹಸ್ತಾಂತರಿಸಿದರು.
ಖತೀಬರಾದ ಶಮೀರ್ ದಾರಿಮಿ ಅವರ ದುವಾದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮುಹಮ್ಮದ್ ಶಾಫಿ ಕಿರೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಖಾಯ ಅಧ್ಯಕ್ಷ ಮನ್ಸೂರ್ ಮೂಡುಬಿದಿರೆ ವಂದಿಸಿದರು.

ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಕೋಶಾಧಿಕಾರಿ ಅಶ್ರಫ್ ಮರೋಡಿ,ಜಿಲ್ಲಾ ಉಪಾಧ್ಯಕ್ಷ ಅಝೀಝ್ ಮಾಲಿಕ್,ಮೂಡುಬಿದಿರೆ ವಲಯಾಧ್ಯಕ್ಷ ರಝಾಕ್ ಮದನಿ,ಜಿಲ್ಲಾ ವಿಖಾಯ ಕನ್ವೀನರ್ ಫಾರೂಕ್ ವಿಶಾಲ್ ನಗರ,ಪ್ರಮುಖರಾದ ಖಾಲಿದ್ ಪೂಲಬೆ,ರಫೀಕ್ ಪಡ್ಡ, ಸದರ್ ಅಬ್ದುಲ್ ರಹಿಮಾನ್ ಯಮಾನಿ,ಹಕೀಮ್ ಜಲಾಲಿ,ಎಸ್.ಕೆ.ರಝಾಕ್,ಸ್ವರೂಪ್ ಕಟ್ಟೆ,ಇಕ್ಬಾಲ್ ಕುರ್ಲೊಟ್ಟು,ಹಕೀಮ್ ಗಾಂಧಿನಗರ,ಶಬೀರ್ ಪಡ್ಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಸ್.ಎಫ್ ಪಡ್ಡಂದಡ್ಕ ಶಾಖೆ ಕಳೆದ ಹಲವು ವರ್ಷಗಳಿಂದ ಅಶಕ್ತರಿಗೆ,ಅನಾರೋಗ್ಯಕ್ಕೊಳಗಾದವರಿಗೆ,ಬಡ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ಸಹಾಯ ಮಾಡುತ್ತಾ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಮಾತ್ರವಲ್ಲದೆ ಮೃತರ ದಫನ ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಸೇವೆ ಮಾಡುತ್ತಾ ಗಮನಸೆಳೆಯುತ್ತಿದೆ.
ಬಡ ಕುಟುಂಬಕ್ಕೆ ನಿರ್ಮಿಸಿದ ಮನೆಗೆ ಸಹಕರಿಸಿದ ಸರ್ವರನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲಾಯಿತು.
ವರದಿ: ಎಚ್.ಮುಹಮ್ಮದ್ ವೇಣೂರು











