ಎಸ್.ಕೆ.ಎಸ್.ಎಸ್.ಎಫ್ ಪಡ್ಡಂದಡ್ಕ ಶಾಖೆ ವತಿಯಿಂದ ಉಚಿತ ಸಾಮೂಹಿಕ ಸುನ್ನತ್ ಹಾಗೂ ಹಿಜಾಮಾ ಶಿಬಿರ

Picture of Namma Bedra

Namma Bedra

Bureau Report

ಸಮಸ್ತದ ನೂರನೇ ವಾರ್ಷಿಕೋತ್ಸವ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್ ಪಡ್ಡಂದಡ್ಕ ಶಾಖೆ ವತಿಯಿಂದ ಉಚಿತ ಸಾಮೂಹಿಕ ಸುನ್ನತ್ ಹಾಗೂ ಹಿಜಾಮ ಶಿಬಿರವು ಇತ್ತೀಚೆಗೆ ನಡೆಯಿತು.
ಎಸ್.ಕೆ.ಎಸ್.ಎಸ್.ಎಫ್. ಪಡ್ಡಂದಡ್ಕ ಶಾಖೆ ಅಧ್ಯಕ್ಷ ಕೆ.ಪಿ.ಬಶೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ನೂರುಲ್ ಹುದಾ ಮಸೀದಿಯ ಖತೀಬರಾದ ಖಲಂದರ್ ಶಾಫಿ ಬಾಖವಿ ಅಲ್ ಮನ್ನಾನಿ ಅವರು ಉದ್ಘಾಟಿಸಿದರು.
ಅಂಗರಕರಿಯ ಅಕ್ರಮ್ ಆಲಿ ತಂಙಳ್ ಅವರು ದುವಾ ನೆರವೇರಿಸಿ ಶುಭ ಹಾರೈಸಿದರು.
ಮಸೀದಿ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಕಟ್ಟೆ,ಕಾರ್ಯದರ್ಶಿ ರಫೀಕ್ ಪಡ್ಡ, ಪತ್ರಕರ್ತ ಎಚ್.ಮುಹಮ್ಮದ್ ವೇಣೂರು, ಎಸ್.ಕೆ.ಎಸ್.ಎಸ್.ಎಫ್.ಮೂಡುಬಿದಿರೆ ವಲಯಾಧ್ಯಕ್ಷ ರಝಾಕ್ ಮದನಿ,ತೋಡಾರು ಜುಮ್ಮಾ ಮಸೀದಿ ಕಮಿಟಿ ಅಧ್ಯಕ್ಷ ಎಂ.ಎ.ಎಸ್ ಆಸಿಫ್,ಅಝೀಝ್ ಮಾಲಿಕ್,ಅಶ್ರಫ್ ಮರೋಡಿ,ಯು.ಕೆ.ಇರ್ಫಾನ್ ,ಅಶ್ರಫ್ ಗಾಂಧಿನಗರ,ಅಶ್ರಫ್ ಕಿರೋಡಿ,ಇಕ್ಬಾಲ್ ಕುರ್ಲೊಟ್ಟು,ಬಶೀರ್ ಗಾಂಧಿನಗರ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಇದ್ರೀಸ್ ಪೂಲಬೆ ಸ್ವಾಗತಿಸಿ ಸ್ವರೂಪ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top