ಪಣಪಿಲದಲ್ಲಿ ಕಿಸಾನ್ ಜಾಗೃತಿ ಗ್ರಾಮ ಸಮಾವೇಶ *ಹಿರಿಯ ಕೃಷಿಕರಿಗೆ ಸನ್ಮಾನ

Picture of Namma Bedra

Namma Bedra

Bureau Report

ಪಣಪಿಲದಲ್ಲಿ ನಡೆದ ಪಣಪಿಲ ಕಿಸಾನ್ ಜಾಗೃತಿ ಗ್ರಾಮ ಸಮಾವೇಶದಲ್ಲಿ ಹಿರಿಯ ಕೃಷಿಕರಾದ ರಾಜವರ್ಮ ಜೈನ್ ಪುತ್ರೊದ್ದು,ದಿನಕರ ಪೂಜಾರಿ ಹಾಗೂ ಹೆನ್ರಿ ಎಲ್.ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.
ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆಯವರ ಮಾರ್ಗದರ್ಶನದಲ್ಲಿ ನಡೆದ ಈ ಸಮಾವೇಶವನ್ನು ಹಿರಿಯ ಪ್ರಗತಿಪರ ಕೃಷಿಕರಾದ ಗೋಪಾಲ ಮೂಲ್ಯ ಅವರು ಉದ್ಘಾಟಿಸಿದರು.
ಶಾಂತಿಪ್ರಸಾದ್ ಹೆಗ್ಡೆಯವರು ಮಾತನಾಡಿ ‘ ರಾಜ್ಯ ಸರಕಾರವು ಇತ್ತೀಚೆಗೆ ಕುಮ್ಕಿ ಕಾಯ್ದೆಗೆ ತಂದಿರುವ ತಿದ್ದುಪಡಿ ಮತ್ತು ಅಕ್ರಮ ಸಕ್ರಮೀಕರಣ ಅರ್ಜಿಗಳ ಇತ್ಯರ್ಥದ ಬಗ್ಗೆ ಸರಕಾರ ಹೊರಡಿಸಿರುವ ಹಲವು ಷರತ್ತುಗಳಿಂದ ರೈತರಿಗಾಗುತ್ತಿರುವ ಅನ್ಯಾಯ’ ದ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಬಗ್ಗೆ ಸೆಲ್ಕೋ ಸೋಲಾರ್ ಕಂಪೆನಿಯ ಹಿರಿಯ ಪ್ರಬಂಧಕರಾದ ರವೀನಾ ಬಂಗೇರ ಅವರು ಮಾಹಿತಿ ನೀಡಿದರು.
ಪ್ರಧಾನಮಂತ್ರಿ ವಯೋವಂದನ್ ಯೋಜನೆಯ ಬಗ್ಗೆ ಆಯುಷ್ಮಾನ್ ಆರೋಗ್ಯ ಮಿತ್ರ ಪ್ರೀತಮ್ ಅವರು ಮಾಹಿತಿ ನೀಡಿದರು.
ರಮಾನಾಥ್ ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರವೀಣ್ ಭಂಡಾರಿ, ಮುನಿರಾಜ ಹೆಗ್ಡೆ,ರವಿ ಪೂಜಾರಿ,ಯುವರಾಜ ಜೈನ್,ಹರಿಯಪ್ಪ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಅಶ್ವಥ್ ಪಣಪಿಲ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top