ಮೇ.3 ರಂದು ಪೇರೋಡ್ ಉಸ್ತಾದ್ ಮೂಡುಬಿದಿರೆಗೆ

Picture of Namma Bedra

Namma Bedra

Bureau Report

ಖ್ಯಾತ ವಿದ್ವಾಂಸರು, ದಾರ್ಶನಿಕರೂ ಆದ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಅವರು ಮೇ.‌3 ರಂದು ಮೂಡುಬಿದಿರೆಗೆ ಆಗಮಿಸಲಿದ್ದಾರೆ.


ಮೂಡುಬಿದಿರೆಯ ಹಾಜಿ ಮಲಂಗ್ ಕ್ಯಾಂಪಸ್ ನ ಮರ್ಕಝ್ ತೈಬಾ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ದ್ವಿತೀಯ ವರ್ಷದ ದ ಅವಾ ದರ್ಸ್ ಉದ್ಘಾಟನೆ ಮತ್ತು ಹಮ್ದ್ ಎಕ್ಸಲೆನ್ಸಿ ಹೈಸ್ಕೂಲ್ ನ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅವರು ದ ಅವಾ ದರ್ಸ್ ಬೋಧನೆ ಮಾಡಲಿದ್ದಾರೆ.
ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮರ್ಕಝ್ ತೈಬಾ & ಹಾಜಿ ಮಲಂಗ್ ಟ್ರಸ್ಟ್ ನ ಅಧ್ಯಕ್ಷರಾದ ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಅವರು ತಿಳಿಸಿದ್ದಾರೆ.
ಮೇ. 9 ರಂದು ಮೂಡುಬಿದಿರೆ ಪಟ್ಟಾಡಿ ಸಮೀಪದಲ್ಲಿ ಹಾಜಿ ಮಲಂಗ್ ಇಂಟರ್ ನ್ಯಾಷನಲ್ ಗರ್ಲ್ಸ್ ಕ್ಯಾಂಪಸ್ ನ ನೂತನ ಕಟ್ಟಡ ಉದ್ಘಾಟನೆ ಹಾಗೂ ಸ್ನೇಹಕೂಟ ಕಾರ್ಯಕ್ರಮ ನಡೆಯಲಿದೆ ಎಂದವರು‌ ತಿಳಿಸಿದ್ದಾರೆ.

I

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top