ದಾರುನ್ನೂರ್ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆಯ ಸಮಾರೋಪ

Picture of Namma Bedra

Namma Bedra

Bureau Report

ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್ ನ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆಯ ಸಮಾರೋಪ ಸಮಾರಂಭವು ಸಂಸ್ಥೆಯ ಅಧ್ಯಕ್ಷರಾದ ಶರೀಫ್ ಹಾಜಿ ವೈಟ್ ಸ್ಟೋನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಗೌರವಾಧ್ಯಕ್ಷರೂ,ದ.ಕ.ಜಿಲ್ಲಾ ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ದುವಾ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಯಶಸ್ಸಿಗೆ ಶ್ರಮಿಸುತ್ತಿರುವ ಗೌರವಾಧ್ಯಕ್ಷರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಧ್ಯಕ್ಷ ಶರೀಫ್ ಹಾಜಿ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಉಪಾಧ್ಯಕ್ಷರಾದ ಸಮದ್ ಹಾಜಿ,ಶಾಹುಲ್ ಹಮೀದ್ ಹಾಜಿ ಮೆಟ್ರೋ, ಜೊತೆ ಕಾರ್ಯದರ್ಶಿ ಅದ್ದು ಹಾಜಿ,ಲೆಕ್ಕ ಪರಿಶೋಧಕರಾದ ಅಹ್ಮದ್ ಅಬುಸ್ವಾಲಿಹ್,ಸದಸ್ಯರಾದ ಎಂ.ಜಿ.ಮುಹಮ್ಮದ್ ಹಾಜಿ,ಅಬೂಬಕ್ಕರ್ ಸಿದ್ದೀಕ್ ಮೆದರಬೆಟ್ಟು,ಇಮ್ರಾನ್ ಕುದ್ರೋಳಿ,ಹಸೈನಾರ್ ಹಾಜಿ ಬಂಡಾಡಿ,ಅಹ್ಮದ್ ಹುಸೇನ್, ಅಬೂಬಕ್ಕರ್ ಮರೋಡಿ, ಅಬ್ದುಲ್ ರಹ್ಮಾನ್ ಹಾಜಿ,ಅಬ್ದುಲ್ ಜಲೀಲ್,ಅಬ್ದುಲ್ ರಶೀದ್ ಹಾಜಿ,ಸದರ್ ಮುದರ್ರಿಸ್ ಹುಸೇನ್ ರಹ್ಮಾನಿ,ಅಬ್ಬಾಸ್ ಮಂಗಳೂರು, ಉಪಪ್ರಾಂಶುಪಾಲರಾದ ರಶೀದ್ ಹುದವಿ,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅನ್ವರ್, ಶಿಕ್ಷಕ ರಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಅಝ್ಹರಿ,ಕೋಶಾಧಿಕಾರಿ ಇಬ್ರಾಹಿಂ ಕೋಡಿಜಾಲ್, ಸಂಸ್ಥೆಯ ಹಿತೈಷಿಗಳಾದ ಸಿ.ಆರ್.ಅಬೂಬಕ್ಕರ್,ಇಬ್ರಾಹಿಂ ಮದೀನಾ,ರಫೀಕ್ ಹಾಜಿ ಕೆ.ಸಿ.ರೋಡ್,ಶಾಫಿ ಕಿರೋಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಫಕೀರಬ್ಬ ಮಾಸ್ಟರ್ ಅವರು ಸ್ವಾಗತಿಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಮಿತಿಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ಹಾಗೂ ಪ್ರಾಂಶುಪಾಲರಾದ ಅಮೀನ್ ಹುದವಿ ಅವರು ಶುಭಾಶಂಸನೆಗೈದರು.ವ್ಯವಸ್ಥಾಪಕರಾದ ಅಬ್ದುಲ್ ಹಕೀಂ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top