ಮಸೀದಿ ಕಮಿಟಿ ದಾಖಲಾತಿ ಮಂಜೂರು ಮಾಡಿಕೊಟ್ಟ ಫಕೀರಬ್ಬ ಮಾಸ್ಟರ್

Picture of Namma Bedra

Namma Bedra

Bureau Report

ವಕ್ಫ್ ಬೋರ್ಡ್ ಗೆ ನೋಂದಾವಣೆಗೊಂಡಿರುವ ಮಸೀದಿಗಳ ಕಮಿಟಿ ನೋಂದಾವಣೆ ಮಂಜೂರಾತಿಗೆ ಬಾಕಿ ಇದ್ದ ಕೆಲವು ಮಸೀದಿಗಳ ನೋಂದಣಿ ಮಾಡಿಸಿಕೊಡುವಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ ಅವರು ಯಶಸ್ವಿಯಾಗಿದ್ದಾರೆ.
ಕೆಲವು ಮಸೀದಿ ಕಮಿಟಿಗಳ ನೋಂದಣಿಗೆ ವಕ್ಫ್ ಬೋರ್ಡ್ ನಲ್ಲಿ ಬಾಕಿ ಉಳಿದಿತ್ತು. ಆ ಪೈಕಿ ವಾಲ್ಪಾಡಿ, ಮರೋಡಿ ಸಹಿತ ಹಲವು ಮಸೀದಿ ಕಮಿಟಿಗಳ ನೋಂದಣೆಗೆ ಶ್ರಮಪಟ್ಟಿದ್ದ ಫಕೀರಬ್ಬ ಮಾಸ್ಟರ್ ಅವರು ಅದರ ಮಂಜೂರು ಪತ್ರವನ್ನು ಇಂದು ಮೂಡುಬಿದಿರೆ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.
ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್,ವಾಲ್ಪಾಡಿ ಮಸೀದಿ ಕಮಿಟಿ ಕಾರ್ಯದರ್ಶಿ ಝಕರಿಯಾ ಯೂಸುಫ್, ಸಲೀಂ ಹಂಡೇಲ್, ಝಮೀರ್,ಸರ್ಫ್ರಾಝ್,ಹೆಚ್.ಎಂ.ರಝಾಕ್, ಹಮೀದ್ ರೋಯಲ್,ಸಲಾಮ್ ಮದನಿ, ಬಶೀರ್ ಲಾಡಿ,ಅಶ್ರಫ್ ಮರೋಡಿ, ಫಾರೂಕ್ ವಿಶಾಲ್ ನಗರ,ಇರ್ಷಾದ್ ಎನ್.ಜಿ.ಮತ್ತಿತರರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top