ಬೆದ್ರ ಫ್ರೆಂಡ್ಸ್ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದ ಬೆದ್ರ’ ಕ್ರಿಕೆಟ್ ಯೂನಿಯನ್ ಹಾಗೂ ಓಪನ್ ವಿಭಾಗದ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ವಾಲ್ಪಾಡಿ ತಂಡವು ಚಾಂಪಿಯನ್ ಆಗಿ ಪ್ರಶಸ್ತಿ ಪಡೆದುಕೊಂಡಿದೆ.

ಫ್ರೆಂಡ್ಸ್ ಝೋನ್ ಶಿರ್ಲಾಲು ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ವಾಲ್ಪಾಡಿ ತಂಡದ ಸುದರ್ಶನ್ ಪಂದ್ಯಶ್ರೇಷ್ಠ, ಕೀರ್ತಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ ಶಿರ್ಲಾಲು ತಂಡದ ಅಜಿತ್ ಬೆಸ್ಟ್ ಬ್ಯಾಟ್ಸ್ಮೆನ್ ಹಾಗೂ ಶಾನವಾಝ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದುಕೊಂಡರು.
ಬೆದ್ರ ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಪಂದ್ಯಾಕೂಟದ ಸಂಯೋಜಕ ಅಭಿಜಿತ್ ಮಕ್ಕಿ, ಹರೀಶ್ ಶಿರ್ಲಾಲ್, ಪ್ರಕಾಶ್ ಕೆರ್ವಾಶೆ, ಸುಕುಮಾರ್ ಕಾರ್ಕಳ, ಮನ್ಸೂರ್ ಹೊಸ್ಮಾರ್,ದಿನೇಶ್ ಬೆದ್ರ, ದಾಮು ಬೆದ್ರ, ಹಾರಿಸ್, ತೀರ್ಪುಗಾರರಾದ ಸತೀಶ್,ದುರ್ಗಾಪ್ರಸಾದ್, ಹಿರಿಯರಾದ ಹಮಿದಾಕ ಮತ್ತಿತರರು ಬಹುಮಾನ ವಿತರಿಸಿದರು.
ಪಂದ್ಯಾಕೂಟದ ಆಯೋಜಕ ಅಭಿಜಿತ್ ಅವರನ್ನು ಫ್ರೆಂಡ್ಸ್ ವಾಲ್ಪಾಡಿ ಪರವಾಗಿ ಸನ್ಮಾನಿಸಲಾಯಿತು.
ಭುವನ್ ಮಕ್ಕಿ ಕಾರ್ಯಕ್ರಮ ನಿರೂಪಿಸಿದರು.






