ಕಸ ಕೊಡುವಾಗ ವಿಷಕಾರಿ ಹಾವನ್ನೂ ಕೊಟ್ಟ ‘ಕಜವು’ ಗಳು !

Picture of Namma Bedra

Namma Bedra

Bureau Report

ಮುನ್ಸಿಪಾಲಿಟಿ, ಪಂಚಾಯತ್ ನವರ ಕಸ ಸಾಗಿಸುವ ಗಾಡಿ ಮನೆ ಮುಂದೆ,ಕಚೇರಿಗಳ ಮುಂದೆ,ಅಂಗಡಿಗಳ ಮುಂದೆ ಬರುತ್ತದೆ.ಹಾಗೆ ಬರುವಾಗ ಹೆಂಗಸರು, ಗಂಡಸರು‌ ಅಂತ ಒಂದು ದೊಡ್ಡ ಗೋಣಿಚೀಲ ಹಿಡ್ಕೊಂಡು ಬರ್ತಾರೆ.ಅದಕ್ಕೆ ನಾವು ಹಸಿಕಸ,ಒಣಕಸ ಅಂತ ಬೇರ್ಪಡಿಸಿ ಕೊಡಬೇಕು.


ಹೀಗೆ ಬರುವವರಿಗೆ ವಿಷಪೂರಿತ ಹಾವನ್ನು ಒಂದು ಬಾಟಲಿಯೊಳಗೆ ಹಾಕಿ ಕೊಟ್ಟರೆ ಅವರನ್ನು ಮನುಷ್ಯರೆಂದು ಒಪ್ಪಿಕೊಳ್ಳಲು ಸಾಧ್ಯನೇ ಇಲ್ಲ. ಇಂತಹದ್ದೊಂದು ಪ್ರಕರಣ ಅದೆಲ್ಲೋ ನಡೆದಿದೆ.ಅದರ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಕಸ ವಿಲೇವಾರಿ ಘಟಕಕ್ಕೆ ಹೋಗಿ ವಿಂಗಡಿಸುವಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಅದರ ಜೊತೆಗೆ ಸ್ತ್ರೀಯರು ಬಳಸಿದ ಪ್ಯಾಡ್, ಮಕ್ಕಳು ಬಳಸಿದ ಪ್ಯಾಂಪರ್ಸ್, ಅದ್ಯಾವಾಗಲೋ ಉಂಡು ಉಳಿದದ್ದನ್ನು ಕಟ್ಟಿಟ್ಟ ತೊಟ್ಟೆಗಳು,ಇನ್ನಿತರ ಅಸಹ್ಯ ವಸ್ತುಗಳು.
ಇದನ್ನೆಲ್ಲಾ ಕೊಡಲು ಮನುಷ್ಯರಾದವರಿಗೆ ಅದ್ಹೇಗೆ ಮನಸ್ಸು ಬಂತೋ.. ?
ಕಸ ಕೊಂಡೊಯ್ಯುವವರು ನಮ್ಮಂತೆಯೇ ಮನುಷ್ಯರಲ್ಲವೇ? ಅವರಿಗೂ ಕುಟುಂಬ ಸಂಸಾರ ಇದೆ.ಅವರಿಗೂ ನಮ್ಮಂತೆಯೇ ಅಸಹ್ಯ, ಹೆದರಿಕೆ ಎಂಬುವುದಿದೆ ಎಂಬುದನ್ನು ಯೋಚಿಸುವುದಿಲ್ಲವೇಕೆ ?
‘ಕಟ್ಟಿಕೊಟ್ಟರೆ ಗೊತ್ತಾಗಲ್ಲ, ಕೊಂಡೊಯ್ಯುತ್ತಾರೆ’ ಎನ್ನುವ ದುರಾಲೋಚನೆಯನ್ನು ಬಿಟ್ಟು ಯೋಗ್ಯ ಕಸಗಳನ್ನೇ ಕೊಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿರಬೇಕು.
ಈ ರೀತಿ ವಿಷಕಾರಿ ಹಾವುಗಳನ್ನು ಕೊಡುವವರ ಮನಸ್ಸು ಅಷ್ಟೇ ವಿಷಕಾರಿ.ಅವರನ್ನು ‘ಕಜವು’ಗಳು ಎನ್ನದೆ ಇನ್ನೇನೆನ್ನಲಿ?

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top