ಇತ್ತೀಚೆಗೆ ಮಹಾರಾಷ್ಟ್ರದ ಅಂದೇರಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕಾಂಬಕ್ಟ್ ಮಾರ್ಸಲ್ ಅರ್ಟ್ಸ್ ಅಕಾಡೆಮಿ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಅಡ್ಯಾರ್ ನ ಬರಾಕ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಅಮೀನತ್ ನಿಶಾ ಅಸ್ನಿ 13 ವರ್ಷ ವಯೋಮಿತಿಯ ಕುಮಿಟೆ ವಿಭಾಗ ದಲ್ಲಿ ಚಿನ್ನದ ಪದಕ ಕಟ ವಿಭಾಗದಲ್ಲಿ ಬೆಳ್ಳಿಯ ಪದಕ ವನ್ನು ಪಡೆದಿರುತ್ತಾರೆ. ಇವರು ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ನ ಮುಖ್ಯ ಶಿಕ್ಷಕ ಮಹಮ್ಮದ್ ನದೀಮ್ ಇವರಿಂದ ತರಬೇತಿ ಪಡೆಯುತಿದ್ದಾರೆ.






