ಹಲ್ಲೆ ಪ್ರಕರಣದ ಆರೋಪಿಗಳಿಗೆ ಜಾಮೀನು *ಆರೋಪಿಗಳ ಪರ ಶರತ್ ಶೆಟ್ಟಿ ವಾದ

Picture of Namma Bedra

Namma Bedra

Bureau Report

ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಉಡುಪಿಯ ಎರಡನೇ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂರು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿದೆ.
ಕಾರ್ಕಳ ತಾಲೂಕು ಕಂಜಾರು ಗ್ರಾಮದ ಪರಾರಿ ಮನೆಯ ಜಯಾನಂದ ಹೆಗ್ಡೆ, ಮಂಜುನಂದ ಹೆಗ್ಡೆ ಹಾಗೂ ಚಂದ್ರಹಾಸ ಹೆಗ್ಡೆ ಎಂಬವರ ವಿರುದ್ಧ ಶಿವರಾಜ್ ಶೆಟ್ಟಿ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಮೂವರು ಆರೋಪಿಗಳ ಪರ ಮೂಡುಬಿದಿರೆಯ ನ್ಯಾಯವಾದಿಯಾಗಿರುವ ಶರತ್ ಶೆಟ್ಟಿ ಡಿ.ಅವರು ಉಡುಪಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top