ಪೆರಿಂಜೆಯಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

Picture of Namma Bedra

Namma Bedra

Bureau Report

ಮೂಡುಬಿದಿರೆ ಸಮೀಪದ ಹೊಸಂಗಡಿ ಗ್ರಾಮದ ಪೆರಿಂಜೆಯ ರೇವತಿ ಎಂಟರ್ ಪ್ರೈಸಸ್ ವತಿಯಿಂದ ನಿರ್ಮಿಸಲಾದ ನೂತನ ಹೆಚ್‌.ಪಿ.ಪೆಟ್ರೋಲ್ ಬಂಕನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಅವರು ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ” ಮುಂಬೈ ಉದ್ಯಮಿಯೋರ್ವರು ಗ್ರಾಮೀಣ ಪ್ರದೇಶವಾದ ಇಲ್ಲಿ ಉದ್ಯಮ ನಡೆಸಲು ಮುಂದಾಗಿರುವುದು ಉತ್ತಮ ಬೆಳಗಣಿಗೆ, ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ, ಮೂಡುಬಿದಿರೆ-ವೇಣೂರು ರಾಜ್ಯ ಹೆದ್ದಾರಿಯಾಗಿ ಹೋಗುವವರಿಗೆ ಇದು ಪ್ರಯೋಜನಕಾರಿಯಾಗಲಿದೆ,ವ್ಯಾಪಾರದಲ್ಲಿ ಧರ್ಮ ಇರಬೇಕು, ಧರ್ಮದಾರಿಯಲ್ಲಿ ನಡೆದಾಗ ಮಾತ್ರ ಯಶಸ್ಸು ಸಾಧ್ಯ’ ಎಂದರು.


ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಧರ್ಮದರ್ಶಿಗಳಾದ ಎ.ಜೀವಂಧರ ಕುಮಾರ್ ಅವರು ದೀಪ ಪ್ರಜ್ವಲಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪೆರಿಂಜೆಗುತ್ತು ಪ್ರಸನ್ನ ಆರ್.ಹೆಗ್ಡೆ, ಹೆಚ್.ಪಿ.ಸಿ.ಎಲ್ ನ ಡಿ‌ಜಿಎಂ.ನವೀನ್ ಕುಮಾರ್ ಎಂ.ಜಿ, ಮುಂಬಯಿ ನ ಕಲ್ಯಾಣ್ ನ ಪಶ್ಚಿಮ ಕ್ಷೇತ್ರದ ಶಾಸಕ ವಿಶ್ವನಾಥ್ ಆತ್ಮರಾಮ್ ಭೋಯಿರ್, ಮುಂಬಯಿ ಕಲ್ಯಾಣ್ ಪಶ್ಚಿಮ ದ ಮಾಜಿ ಕಾರ್ಪೊರೇಟರ್ ಜಯ್ ವಾಣಿ ಭೋಯಿರ್, ಹೆಚ್.ಪಿ.ಸಿ.ಎಲ್ ಮಂಗಳೂರು ವಲಯ ಮುಖ್ಯ ಅಭಿಯಂತರರಾದ ಪ್ರಭಾತ್ ಶ್ರೀವಾಸ್ತವ್,ವೇಣೂರು ಚರ್ಚ್ ಧರ್ಮಗುರುಗಳಾದ ರೆ.ಫಾ.ಎಡ್ವಿನ್ ಸಂತೋಷ್ ಮೋನಿಸ್, ಪೂಲಬೆ ಮಸೀದಿಯ ಅಧ್ಯಕ್ಷ ಹೆಚ್.ಆಲಿಯಬ್ಬ,ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ,ವೇಣೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜಯರಾಮ ಶೆಟ್ಟಿ,ಪತ್ರಕರ್ತ, ವೇಣೂರು ಸಿ.ಎ.ಬ್ಯಾಂಕ್ ನ ನಿವೃತ್ತ ಪ್ರಬಂಧಕ ಹೆಚ್.ಮುಹಮ್ಮದ್ ವೇಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ರೇವತಿ ಎಂಟರ್ ಪ್ರೈಸಸ್ ಮಾಲಕರಾದ ಶ್ರೀಮತಿ ದೇವಿಕಾ ವಿ.ಶೆಟ್ಟಿ,ವಿಶ್ವನಾಥ ಎಸ್‌.ಶೆಟ್ಟಿ,ಶ್ರೀಮತಿ ರೇವತಿ ವಿಶ್ವನಾಥ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ನೂತನ ಸಂಸ್ಥೆಯ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ರಮೇಶ್ ಪೂಜಾರಿ,ನಾಗೇಶ್ ಅಂಚನ್, ಹರಿಶ್ಚಂದ್ರ, ಬದ್ರುದ್ದೀನ್,ಪ್ರವೀಣ್ ಶೆಟ್ಟಿ ಮಂಗಳೂರು,ಅರುಣ್ ಹೆಗ್ಡೆ,ವಿಶ್ವಾಸ್ ಜೈನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ‌‌‌.
ಸಂಸ್ಥೆಯ ಮಾಲಕರಾದ ವಿಶ್ವನಾಥ ಎಸ್.ಶೆಟ್ಟಿ ಸ್ವಾಗತಿಸಿ ಉಮೇಶ್ ಶೆಟ್ಟಿ ವಂದಿಸಿದರು.ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top