ಮೂಡುಬಿದಿರೆ ಪುರಸಭೆ: ಹಾಲಿ ಸದಸ್ಯರ ಪೈಕಿ 6 ಮಂದಿಗೆ ಸೀಟಿಲ್ಲ! *ಬೇರೆ ವಾರ್ಡ್ ಗಳತ್ತ ಕಣ್ಣಿಟ್ಟಿರುವವರು ಯಾರ್ಯಾರು?

Picture of Namma Bedra

Namma Bedra

Bureau Report

ಮೂಡುಬಿದಿರೆ ಪುರಸಭಾಡಳಿತದ ಅವಧಿ ಮುಗಿದು ಆಡಳಿತಾಧಿಕಾರಿ ನೇಮಕವಾಗಿದೆ.ಶೀಘ್ರದಲ್ಲೇ ಪುರಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ.ಅಚ್ಚರಿಯ ಸಂಗತಿಯೆಂದರೆ ಹಾಲಿ ಸದಸ್ಯರ ಪೈಕಿ 6 ಮಂದಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.ಅದರಲ್ಲಿ ಮೂವರು ಬಿಜೆಪಿಯವರು,ಮೂವರು ಕಾಂಗ್ರೆಸ್ ನವರೆಂದು ಹೇಳಲಾಗುತ್ತಿದೆ.ಅವರು ಯಾರ್ಯಾರು ಎನ್ನುವುದೇ ಸದ್ಯದ ಚರ್ಚೆಯ ವಿಷಯ.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಪುರಸಭಾಡಳಿತ ನಡೆಸಿದೆ.23 ಸದಸ್ಯಬಲ ಹೊಂದಿರುವ ಪುರಸಭೆಗೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ 12 ಹಾಗೂ ಕಾಂಗ್ರೆಸ್ ನಿಂದ 11 ಮಂದಿ ಆಯ್ಕೆಯಾಗಿದ್ದರು.
ಪ್ರಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಮೊದಲಾರ್ಧ ಅವಧಿಗೆ ಪ್ರಸಾದ್ ಕುಮಾರ್ ಅಧ್ಯಕ್ಷರಾಗಿ,ಸುಜಾತಾ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ ದ್ವಿತೀಯಾರ್ಧದ ಅವಧಿಗೆ ಜಯಶ್ರೀ ಕೇಶವ್ ಅಧ್ಯಕ್ಷರಾಗಿ, ನಾಗರಾಜ್ ಪೂಜಾರಿ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ.
ಇದೀಗ ಬಿಜೆಪಿಯಿಂದ ಮೂವರು , ಕಾಂಗ್ರೆಸ್ ನಿಂದ ಮೂವರು ಸ್ಥಾನ ಕಳೆದುಕೊಳ್ಳಲಿದ್ದು ಅವರ ಬದಲಿಗೆ ಹೊಸ ಅಭ್ಯರ್ಥಿಗಳ ತಯಾರಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಹಾಲಿ ಸದಸ್ಯರಾಗಿರುವವರೇ ಕೆಲ ಮಂದಿ ಪಕ್ಕದ ವಾರ್ಡ್ ಗಳಲ್ಲಿ ಸ್ಪರ್ಧಿಸಲು ಮನಸ್ಸು ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು ಅವರು ಯಾರ್ಯಾರು, ಸ್ಥಾನ ಕಳೆದುಕೊಳ್ಳಲಿರುವವರು ಯಾರು ಎಂಬ ಬಗ್ಗೆ ಎರಡೂ ಪಕ್ಷಗಳಲ್ಲಿ ಚರ್ಚೆಯಾಗುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top