ಇಂದಿನಿಂದ ಮತ್ತೊಂದು ಹೊಸ ಸ್ಕ್ಯಾಮ್ ಶುರುವಾಗಿದೆ. ಆರ್.ಟಿ.ಒ. ಚಲನ್ ಎಂಬ ಹೆಸರಿನಲ್ಲಿ ಫೈನ್ ಕಟ್ಟಬೇಕೆಂದು ಮೆಸೇಜ್ ಬರುತ್ತದೆ.ಆ ಲಿಂಕನ್ನು ಒತ್ತಿದರೆ ಅವರ ಖಾತೆಯಲ್ಲಿರುವ ಹಣವೆಲ್ಲಾ ಮಂಗಮಾಯವಾಗುತ್ತದೆ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ.
ಬೇರೆ ಬೇರೆ ನಂ. ಗಳಿಂದ ಈ ಮೆಸೇಜ್ ಬರುತ್ತದೆ. ಸಿಗ್ನಲ್ ನಲ್ಲಿ ನಿಮ್ಮ ವಾಹನ ತಪ್ಪು ಮಾಡಿದ್ದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.ಅದರ ಫೈನ್ ಕಟ್ಡಬೇಕೆಂದು ಅದರಲ್ಲಿರುತ್ತದೆ.
ಅದರ ಕೆಳಗೆ ಒಂದು ಆಪನ್ನೂ ನೀಡಲಾಗುತ್ತದೆ.
ಕೆಲವರು ಆಶ್ಚರ್ಯದಿಂದ ಈ ಆಪನ್ನು ಡೌನ್ಲೋಡ್ ಮಾಡುತ್ತಾರೆ.ಆಗಾಗಲೇ ಅವರ ಖಾತೆಯಲ್ಲಿರುವ ಹಣ ವಂಚಕರ ಪಾಲಾಗುತ್ತದೆ ಎನ್ನಲಾಗುತ್ತಿದೆ.
ಮೂಡುಬಿದಿರೆಯಲ್ಲಿ ಕೆಲವರು ಈ ವಂಚಕರ ಬಲೆಗೆ ಬಿದ್ದು ಹಣಕಳೆದುಕೊಂಡಿದ್ದಾರೆಂದೂ ಹೇಳಲಾಗುತ್ತಿದೆ.ಈ ಬಗ್ಗೆ ಮೂಡುಬಿದಿರೆಯ ಕೆಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ವಸೀರ್ ಪುತ್ತಿಗೆ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ಎಚ್ಚರಿಕೆಯ ಸಂದೇಶ ಹಾಕುತ್ತಿದ್ದು ,ಮೋಸ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಈಗಾಗಲೇ ಲಿಂಕ್ ಒತ್ತಿರುವ ಹಲವರ ವಾಟ್ಸಾಪ್ ಹ್ಯಾಕ್ ಆಗಿದ್ದು, ಮತ್ತೆ ಕೆಲವರ ಖಾತೆಯಿಂದ ಹಣ ಹೋಗಿರುವುದು ತಿಳಿದು ಬಂದಿದ್ದು ಸಾರ್ವಜನಿಕರು ಇಂತಹ ಸಂದೇಶಗಳಿಂದ ಎಚ್ಚೆತ್ತುಕೊಳ್ಳಬೇಕಿದೆ.








































