ಫ್ರೆಂಡ್ಸ್ ವಾಲ್ಪಾಡಿ ತಂಡದ ಹೊಸ ಜೆರ್ಸಿ ಬಿಡುಗಡೆ

Picture of Namma Bedra

Namma Bedra

Bureau Report

ಫ್ರೆಂಡ್ಸ್ ವಾಲ್ಪಾಡಿ ತಂಡದ ಹಾಗೂ ಕಾರ್ಕಳ-ಬೆದ್ರ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುವ ಫ್ರೆಂಡ್ಸ್ ವಾಲ್ಪಾಡಿ ತಂಡದ ಹೊಸ ಜೆರ್ಸಿಯನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಶನಿವಾರ ಸಂಜೆ ಮೂಡುಬಿದಿರೆ ಸಮಾಜಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಪಡುಮಾರ್ನಾಡು ಗ್ರಾಮ ಪಂಚಾಯತ್ ಸದಸ್ಯರು,ವಾಲ್ಪಾಡಿ ತಂಡದ ಪ್ರೋತ್ಸಾಹಕರಾದ ರಮೇಶ್ ಶೆಟ್ಟಿ, ಬೆದ್ರ ಕ್ರಿಕೆಟ್ ಯೂನಿಯನ್ ಕಾರ್ಯದರ್ಶಿ, ತೋಡಾರ್ ತಂಡದ ಮಾಲಕ ವಿಶಾಲ್ ತೋಡಾರ್,ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಜಯಶ್ರೀ ಹೊಟೇಲ್ ಮಾಲಕರಾದ ಸುರೇಶ್ ಅಂಚನ್, ಬೆದ್ರ ಕೆಫೆಯ ಮಾಲಕರಾದ ಹನೀಫ್ ರಹ್ಮಾನಿಯಾ ಹಾಗೂ ಹಫೀಝ್ ತೋಡಾರ್ ಅವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.


ಫ್ರೆಂಡ್ಸ್ ವಾಲ್ಪಾಡಿ ತಂಡದ ಕಪ್ತಾನ ಸುದರ್ಶನ್, ಫ್ರೆಂಡ್ಸ್ ವಾಲ್ಪಾಡಿ ( ಲೀಗ್) ತಂಡದ ಕಪ್ತಾನ ಪ್ರಮೋದ್ ಕೊಡ್ಯಡ್ಕ, ಐಕಾನ್ ಆಟಗಾರರಾದ ಸಿರಾಜ್ ಪುತ್ತಿಗೆ, ಚೇತನ್ ಅಲಂಗಾರ್,ಆಟಗಾರರಾದ ಅಲ್ತಾಫ್ ವಾಲ್ಪಾಡಿ, ಹನೀಫ್ ವಾಲ್ಪಾಡಿ, ಇರ್ಷಾದ್ ವಾಲ್ಪಾಡಿ,ಕೀರ್ತಿ, ಸಿನಾನ್ ಪುತ್ತಿಗೆ, ಅಶ್ರಫ್ ಪುತ್ತಿಗೆ, ಲತೀಫ್ ಮೂಡುಬಿದಿರೆ,ಸೈಫ್ ಪುತ್ತಿಗೆ, ನಿಝಾಮ್ , ಅಶ್ಫಾಹ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೆರ್ಸಿ ಪ್ರಾಯೋಜಕರಾದ ಸುಕುಮಾರ್ ಅಮೀನ್ ಕಲ್ಲಮುಂಡ್ಕೂರು, ಹರ್ಷದ್ ಮಾರ್ನಾಡ್, ಪ್ರವೀಣ್ ಕುಮಾರ್ ಶಿರ್ತಾಡಿ, ನಝೀರ್ ಪುತ್ತಿಗೆ, ಬದ್ರುದ್ದೀನ್ ಲಕ್ಸುರಿ ಲಿವಿಂಗ್, ರವೂಫ್ ವಾಲ್ಪಾಡಿ, ಮುನ್ನ ಶೆಟ್ಟಿ ವಾಲ್ಪಾಡಿ, ಸಿರಾಜ್ ವಾಲ್ಪಾಡಿ ,ಅಮೀರ್ ವಾಲ್ಪಾಡಿ ಹಾಗೂ ಶಾಹಿಲ್ ವಾಲ್ಪಾಡಿ ಅವರು ತಂಡಕ್ಕೆ ಶುಭ ಹಾರೈಸಿದ್ದಾರೆ.
ತಂಡದ ಮಾಲಕ ಅಶ್ರಫ್ ವಾಲ್ಪಾಡಿ ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top