ಕರಾವಳಿ ಹಾಗೂ ರಾಜ್ಯದಲ್ಲಿ ತನ್ನದೇ ಆದ ಹೆಸರುಗಳಿಸಿಕೊಂಡಿರುವ ಬೆದ್ರ ಮೀಡಿಯಾ ತಂಡವು ದುಬೈನಲ್ಲಿ ಡಿ.12 ರಿಂದ ಆರಂಭಗೊಳ್ಳಲಿರುವ ‘ ಬೆಜಾಯ್ಸ್ ಚಾಂಪಿಯನ್ ಕಪ್- 2025 ‘ ರ ಮೊದಲ ಆವೃತ್ತಿಯ ಪಂದ್ಯಾಕೂಟದ ನೇರಪ್ರಸಾರಕ್ಕಾಗಿ ದುಬೈಗೆ ತೆರಳಲಿದೆ.
ಅಂಡರ್ ಆರ್ಮ್ – ಓವರ್ ಆರ್ಮ್ ಎರಡೂ ವಿಭಾಗದ ಕ್ರಿಕೆಟ್ ವಿಭಾಗದಲ್ಲೂ ಕ್ಲೀಯರ್ ಆಗಿರುವ ಮತ್ತು ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಲೈವ್ ನೀಡುತ್ತಾ ಬಂದಿರುವ ಬೆದ್ರ ಮೀಡಿಯಾ ಅಪಾರ ಜನಪ್ರಿಯತೆ ಗಳಿಸಿರುವ ಮೂಡುಬಿದಿರೆಯ ಹೆಮ್ಮೆಯ ಸಂಸ್ಥೆ.
ಸ್ಪಷ್ಟವಾದ ನೇರಪ್ರಸಾರ,ಮೂರನೇ ತೀರ್ಪುಗಾರಿಕೆ ಹಾಗೂ ಇನ್ನಿತರ ಕೆಲವು ಹೊಸ ಪ್ರಯೋಗಗಳೊಂದಿಗೆ ಸೈ ಎನಿಸಿರುವ ಬೆದ್ರ ಮೀಡಿಯಾ ಇಂದು ವಿದೇಶದಲ್ಲೂ ಬೇಡಿಕೆ ಪಡೆದುಕೊಂಡಿದೆ.


ದುಬೈನ ಶಾರ್ಜಾದ ಕ್ವೀನ್ಸ್ ಲ್ಯಾಂಡ್ & ಕ್ವೀನ್ಸ್ ಪಾರ್ಕ್ ಗ್ರೌಂಡ್ ನಲ್ಲಿ ‘ ಬೆಜಾಯ್ಸ್ ಚಾಂಪಿಯನ್ ಕಪ್’ ಡಿ.12 ರಿಂದ 14 ರವರೆಗೆ ನಡೆಯಲಿದೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಜನಪ್ರಿಯ ಗಾಯಕ ಹನಾನ್ ಶಾ, ಸಾಮಾಜಿಕ ಮಾಧ್ಯಮದ ಸ್ಟಾರ್ ಎಂದೆನಿಸಿಕೊಂಡಿರುವ ಅಜ್ಮಲ್ ಖಾನ್ ಈ ಪಂದ್ಯದ ವಿಶೇಷ ಆಕರ್ಷಣೆಯಾಗಿದ್ದಾರೆ.
ಮೂಡುಬಿದಿರೆಯವರೇ ಆಗಿರುವ,ಅಂತರರಾಷ್ಟ್ರೀಯ ಖ್ಯಾತಿಯ ಸಾಹಿಲ್ ಝಹೀರ್ ನಿರೂಪಣೆ ಮಾಡಲಿದ್ದಾರೆ.
ಬೆದ್ರ ಮೀಡಿಯಾ ತಂಡದ ಮುಖ್ಯಸ್ಥ ಇರ್ಫಾನ್ ಬೆದ್ರ ಹಾಗೂ ಅವರ ಬಳಗದ ರಾಘವೇಂದ್ರ ಶೆಟ್ಟಿ, ದೀಕ್ಷಿತ್, ನಿಬ್ರಾಝ್,ಸುಹಾನ್ ಹಾಗೂ ರಿಫಾನ್ ಇಂದು ರಾತ್ರಿ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ.
ಬೆದ್ರ ಕ್ರಿಕೆಟ್ ಯೂನಿಯನ್, ಮೂಡುಬಿದಿರೆಯ ಕ್ರಿಕೆಟ್ ಆಟಗಾರರು, ಅಭಿಮಾನಿಗಳು ಬೆದ್ರ ಮೀಡಿಯಾ ತಂಡಕ್ಕೆ ಯಶಸ್ಸನ್ನು ಹಾರೈಸಿದ್ದಾರೆ.






