ಶಿರ್ತಾಡಿಯಲ್ಲಿ ಸೋಮವಾರ ರಾತ್ರಿ ಸ್ವಲ್ಪ ಸಮಯ ಕರೆಂಟ್ ಹೋಗಿತ್ತು. ತುಂಬಾ ಮಂದಿ ಪವರ್ ಮ್ಯಾನ್ ಗಳಿಗೆ, ಮೆಸ್ಕಾಂ ಗೆ ಕಾಲ್ ಮಾಡಿ ವಿಚಾರಿಸಿದರು.ಅವರಿಗೂ ಆಶ್ಚರ್ಯ… ನಮ್ಮಿಂದ ಕರೆಂಟ್ ಕಟ್ ಆಗಿಲ್ಲ, ಲೋಡ್ ಶೆಡ್ಡಿಂಗ್ ಕೂಡಾ ಇಲ್ಲ.. ಹಾಗಾದರೆ ಕರೆಂಟ್ ಕಟ್ ಮಾಡಿದವರು ಯಾರು?
ಪವರ್ ಮ್ಯಾನ್ ಗಳು ಲೈಟ್ ಹಿಡ್ಕೊಂಡು ಎಲ್ಲಿ ಫಾಲ್ಟ್ ಇದೆ ಅಂತ ಹುಡುಕಾಡಲು ಹೊರಡುತ್ತಾರೆ.ಪಾಪ,ಅವರಿಗೆ ಮಳೆಗಾಲ,ಚಳಿಗಾಲ,ಬೇಸಿಗೆಕಾಲ ಅಂತ ಇಲ್ಲ. ಎಲ್ಲಿ ಸಮಸ್ಯೆಯಾದರೂ ಎದ್ದು ಹೋಗಬೇಕು. ಅವರಿಗೆ ನಿನ್ನೆಯದ್ದೊಂದು ಹೊಸ ಅನುಭವ.
ಹಾಗೆ ಹುಡುಕಾಡಿಕೊಂಡು ಹೋದವರಿಗೊಂದು ಆಶ್ಚರ್ಯ. ಶಿರ್ತಾಡಿಯ ದಡ್ಡಾಲ್ಪಲ್ಕೆ ಟಿಸಿಯನ್ನು ಗಮನಿಸಿದಾಗ ಅದರಲ್ಲಿ ಕಪ್ಪೆಯೊಂದು ಸತ್ತುಬಿದ್ದದ್ದು ಕಾಣುತ್ತದೆ. ಉಂದೆತ ಉಪದ್ರನಾ ಅಂತ ಅದನ್ನು ಹೊರತೆಗೆದ ನಂತರವೇ ಕರೆಂಟ್ ಸರಿ ಆಗುತ್ತದೆ. ಅದಕ್ಕಿಂತ ಮುಂಚೆ ಅದೆಷ್ಟು ಸಲ ಆನ್ ಮಾಡಿದ್ರೂ ಕಪ್ಪೆಗೆ ಅರ್ಥ್ ಆಗಿರುವುದರಿಂದ ಸರಿಯಾಗಿರಲಿಲ್ಲ.
ಕಪ್ಪೆಗಳ ಕಿತಾಪತಿಯಿಂದಲೂ ಕರೆಂಟ್ ಕಟ್ ಆಗುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿ.






