ಪುತ್ತಿಗೆಯಲ್ಲಿ ‘ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಮತ್ತು ಸಭೆ ಸಮಾರಂಭಗಳಲ್ಲಿ ಶಿಸ್ತು’ ಕುರಿತಾದ ಮಾಹಿತಿ

Picture of Namma Bedra

Namma Bedra

Bureau Report

ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಬಿ- ಹ್ಯೂಮನ್ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಮುಸ್ಲಿಂ ಮಹಿಳೆಯರಿಗಾಗಿ ‘ಆರೋಗ್ಯ ಮಾಹಿತಿ ಮತ್ತು ಸಭೆ ಸಮಾರಂಭಗಳಲ್ಲಿ ಶಿಸ್ತು’ ಕುರಿತಾದ ಮಾಹಿತಿ ಕಾರ್ಯಕ್ರಮವು ಪುತ್ತಿಗೆ ಕನ್ವೆನ್ಷನ್ ಸೆಂಟರ್ ನಲ್ಲಿ ಮಂಗಳವಾರ ನಡೆಯಿತು.
ಆರೋಗ್ಯ ಮಾಹಿತಿಯನ್ನು ಡಾ|ಫರ್ಹಾನ್ ಝಮೀರ್ ಹಾಗೂ ಕಾರ್ಯಕ್ರಮಗಳಲ್ಲಿ ಶಿಸ್ತುಪಾಲನೆ ಕುರಿತಾಗಿ ಶ್ರೀಮತಿ ಹುಮೇರ ಕಾರ್ಕಳ ಅವರು ಮಾಹಿತಿ ನೀಡಿದರು.


ಪುರುಷರಿಗೆ ಇದೇ ಕಾರ್ಯಕ್ರಮ ಈ ಹಿಂದೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದಿದ್ದು ಮಹಿಳೆಯರಿಗೆ ಪ್ರತ್ಯೇಕವಾಗಿ ಪುತ್ತಿಗೆಯಲ್ಲಿ ಏರ್ಪಡಿಸಲಾಗಿತ್ತು.ಮೂಡುಬಿದಿರೆ ಆಸುಪಾಸಿನ ಜಮಾತ್ ನ ಸುಮಾರು 450 ಮಂದಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್, ಕಾರ್ಯದರ್ಶಿ ಇರ್ಷಾದ್ ಎನ್.ಜಿ, ಬಿ-ಹ್ಯೂಮನ್ ಮೂಡುಬಿದಿರೆ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ, ಕಾರ್ಯದರ್ಶಿ ಮುಹಮ್ಮದ್ ಯಾಸಿರ್, , ಸಿ.ಎಚ್.ಗಫೂರ್, ರಿಝ್ವಾನ್ ಕೋಟೆಬಾಗಿಲು, ಹಸ್ದುಲ್ಲಾ ಇಸ್ಮಾಯಿಲ್, ಹಮೀದ್ ರೋಯಲ್, ಅಹ್ಮದ್ ಹುಸೇನ್,ಮಾಲಿಕ್ ಅಝೀಝ್, ರಝಾಕ್ ಸಚ್ಚರಿಪೇಟೆ, ಹರ್ಷದ್ ಮಾರ್ನಾಡ್, ಕೆ.ಎಸ್.ಅಬೂಬಕ್ಕರ್, ಫಾರೂಕ್ ವಿಶಾಲ್ ನಗರ,ಬಶೀರ್ ಲಾಡಿ, ಹನೀಫ್ ತೋಡಾರ್, ಮುಹಮ್ಮದ್ ಬೆಳ್ಳೆಚ್ಚಾರು,ಖಯ್ಯಾಮ್ ಪುತ್ತಿಗೆ, ಖಯ್ಯಾಮ್ ಬೆಳುವಾಯಿ, ಗಫೂರ್ ಕೋಟೆಬಾಗಿಲು, ಕೆ.ಎಸ್.ಅಬೂಬಕ್ಕರ್, ಅಶ್ರಫ್ ಮರೋಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top