ಬಜ್ಪೆ, ಕಿನ್ನಿಗೋಳಿಯಲ್ಲಿ ಬಿಜೆಪಿ ‘ಕೈ’ ಹಿಡಿದ ಮತದಾರರು

Picture of Namma Bedra

Namma Bedra

Bureau Report

ಬಜ್ಪೆ ಪಟ್ಟಣ ಪಂಚಾಯತ್ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಪಡೆದಿರುವ ಬಿಜೆಪಿ ಎರಡೂ ಕಡೆಗಳಲ್ಲೂ ಅಧಿಕಾರಕ್ಕೇರಲಿದೆ.
19 ಸ್ಥಾನಗಳನ್ನು ಹೊಂದಿರುವ ಬಜ್ಪೆ ಪಟ್ಟಣ ಪಂಚಾಯತ್ ನಲ್ಲಿ 11 ಬಿಜೆಪಿ, 4 ಕಾಂಗ್ರೆಸ್, 3 ಎಸ್.ಡಿ.ಪಿ.ಐ ಹಾಗೂ 1 ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ 18 ಸ್ಥಾನಗಳ ಪೈಕಿ 10 ಬಿಜೆಪಿ ಹಾಗೂ 8 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ.
ಬಜ್ಪೆಯಲ್ಲಿ ಎಸ್.ಡಿ‌.ಪಿ.ಐ ಮೂರು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಎಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆಂದು ನಿರೀಕ್ಷಿಸಲಾಗಿತ್ತೋ ಅಲ್ಲೆಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ.
ಕೆಲವೆಡೆ ಅಭ್ಯರ್ಥಿಗಳ ಆಯ್ಕೆಯಲ್ಲಿ ನಡೆದ ಗೊಂದಲಗಳೇ ಕಾಂಗ್ರೆಸ್ ಸೋಲಿಗೆ ಕಾರಣವೆನ್ನಲಾಗುತ್ತಿದೆ. ಬಿಜೆಪಿ ನಿರೀಕ್ಷಿಸಿದಂತೆಯೇ ಫಲಿತಾಂಶ ಹೊರಬಿದ್ದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top