ಇಂದು ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೂಡುಬಿದಿರೆ ಗಾಂಧಿನಗರದ ನವ್ಯಾಳ ಆ ನಿರ್ಧಾರಕ್ಕೆ ಪ್ರೇಮ ವೈಫಲ್ಯವೇ ಕಾರಣವೆಂದು ಹೇಳಲಾಗುತ್ತಿದೆ.
ನವ್ಯಾ ಗುರುಪುರ ಮಳಲಿ ಸಮೀಪದ ಮೊಗರು ಎಂಬಲ್ಲಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತ ನಿರಾಕರಿಸುತ್ತಿದ್ದನೆನ್ನಲಾಗಿದೆ.ಅದರೆ ಈಕೆಗೆ ಆತನನ್ನು ಮರೆಯಲು ಸಾಧ್ಯವಿಲ್ಲದಂತಿದ್ದು ಅದೇ ಚಿಂತೆಯಿಂದ ಇದ್ದಳೆನ್ನಲಾಗಿದೆ.
ತನ್ನ ಸ್ಬೇಹಿತೆಯನ್ನು ಇಂದು ಗುರುಪುರಕ್ಕೆ ಕರೆದುಕೊಂಡು ಹೋಗಿದ್ದಾಳೆ.ಅಲ್ಲಿ ಸೇತುವೆ ಬಳಿ ನಿಂತು ಇಬ್ಬರೂ ಮಾತಾಡಿಕೊಂಡಿದ್ದಾರೆ.ಕುಡಿಯಲು ನೀರಿನ ಬಾಟಲ್ ಕೇಳಿದ್ದಾಳೆ.ಸ್ನೇಹಿತೆ ಕುಡಿವ ನೀರಿನ ಬಾಟಲ್ ತೆಗೆಯುವಷ್ಟರಲ್ಲಿ ಆಕೆ ನದಿಗೆ ಹಾರಿದ್ದಾಳೆ.ಆಕೆಯ ಸ್ನೇಹಿತೆ ಕೈ ಹಿಡಿದು ರಕ್ಷಿಸಲೆತ್ನಿಸಿದರೂ ಅದು ಫಲಕಾರಿಯಾಗಿಲ್ಲವೆನ್ನಲಾಗಿದೆ.
ನವ್ಯ ಮೂಡುಬಿದಿರೆಯ ಅಲಂಕಾರ್ ಸಂಸ್ಥೆಯಲ್ಲಿ ಉದ್ಯೋಗ ಮಾಡಿಕೊಂಡಿದ್ದಳು.






