ಮಿಜಾರು ಶಾಲಾ ಆಟದ ಮೈದಾನದಲ್ಲಿ ಹೊಸಕಟ್ಟಡ ನಿರ್ಮಾಣಕ್ಕೆ ಹೊರಟ ಶಾಲಾ ಮುಖ್ಯಸ್ಥರ ಕ್ರಮಕ್ಕೆ ಗ್ರಾಮಸ್ಥರ ವಿರೋಧ

Picture of Namma Bedra

Namma Bedra

Bureau Report

ಸುಮಾರು ನೂರು ವರ್ಷಗಳಷ್ಟು ಇತಿಹಾಸವಿರುವ ಮಿಜಾರು ಶಾಲಾ ಆಟದ ಮೈದಾನದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ಶಾಲಾ ಮುಖ್ಯಸ್ಥರ ಕ್ರಮವನ್ನು ತೋಡಾರು, ಮಿಜಾರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಈಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮಸ್ಥರಾದ ಡಿ.ಎ.ಉಸ್ಮಾನ್ ಅವರು ‘ ಈ ಶಾಲಾ ಆಟದ ಮೈದಾನಕ್ಕೆ ನೂರು ವರ್ಷಗಳ ಇತಿಹಾಸವಿದೆ, 1950 ರಿಂದ ಇಲ್ಲಿ ಆಟೋಟ ಚಟುವಟಿಕೆಗಳು,ಕ್ರೀಡಾ ಚಟುವಟಿಕೆಗಳು ನಡೆಯುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಸುಂದರವಾದ ಮೈದಾನ ಪಕ್ಕದಲ್ಲಿ ಬೇರಲ್ಲೂ ಇಲ್ಲ, ಇದೀಗ ಈ ಶಾಲೆಗೆ ನಾಲ್ಕು ಕೊಠಡಿಗಳು ಮಂಜೂರಾಗಿದ್ದು ಅದನ್ನು ಈ ಮೈದಾನದಲ್ಲೇ ನಿರ್ಮಿಸಲು ಹೊರಟಿದ್ದಾರೆ, ಕಟ್ಟಡ ನಿರ್ಮಾಣಕ್ಕೆ ವಿರೋಧವಿಲ್ಲ,ಆದರೆ ,ಆಟದ ಮೈದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ನಮ್ಮ ವಿರೋಧವಿದೆ ಎಂದರು.
ಈಗ ಈ ಶಾಲೆ ಕೆ.ಪಿ.ಎಸ್.ಆಗಿದೆ, ಪ್ರಾಥಮಿಕ, ಪ್ರೌಢಶಾಲಾ ಕಟ್ಟಡಗಳು ಒಂದೇ ಕಡೆ ಇರಬೇಕೆಂಬ ನಿಯಮವಿದೆ ಸರಿ, ಆದರೆ ಇಲ್ಲಿನ ಹೈಸ್ಕೂಲ್ ಪಕ್ಕದಲ್ಲಿ ಬೇಕಾದಷ್ಟು ಜಾಗವಿದೆ,ಶಾಲಾ ಹೊಸ ಕೊಠಡಿಗಳನ್ನು ಅಲ್ಲಿ ನಿರ್ಮಿಸಲಿ ಎಂದು ಹೇಳಿದ ಅವರು ನಾವು ಈಬಗ್ಗೆ ಈಗಾಗಲೇ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಮ್ಮಬೇಡಿಕೆಯನ್ನು ಕಳುಹಿಸಿದ್ದೇವೆ ಎಂದರು.
ತಾ‌.ಪಂ.ಮಾಜಿ ಸದಸ್ಯ, ಮಾಜಿ ಸೈನಿಕ ಎಂ.ಜಿ.ಮುಹಮ್ಮದ್, ಗ್ರಾ.ಪಂ.ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಎಂ.ಎ.ರಝಾಕ್, ಎಂ.ಎ.ಅಶ್ರಫ್, ಹಫೀಝ್ ತೋಡಾರ್, ಝುಬೈರ್ ತೋಡಾರ್, ನವದೀಪ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top