ಕಳೆದೊಂದು ವಾರದಿಂದ ಜೀವನ್ಮರಣದ ಹೋರಾಟದಲ್ಲಿದ್ದ ಮೂಡುಬಿದಿರೆಯ ಆಳ್ವಾಸ್ ವಿದ್ಯಾರ್ಥಿ ಓಂಕಾರ್ ಪೂಜಾರಿ ಇಂದು ಕೊನೆಯುಸಿರೆಳೆದಿದ್ದಾನೆ.
ಮೂಡುಬಿದಿರೆಯ ಯುವಕನಾಗಿರುವ ಯುವಕ ಸೇನೆ ಸೇರುವ ಕನಸು ಕಂಡಿದ್ದ. ಒಂದುವಾರದ ಹಿಂದೆ ಹೊಟ್ಟೆನೋವು ಎಂದು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಓಂಕಾರ್ ಅಲ್ಲಿ ಚಿಕಿತ್ಸೆ ಫಲಿಸದೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಅಲ್ಲೂ ಕೆಲ ದಿನ ಚಿಕಿತ್ಸೆ ಪಡೆದಿದ್ದರೂ ಫಲಿಸದೆ ಇಂದು ನಿಧನನಾಗಿದ್ದಾನೆ.
ಚಿಕಿತ್ಸೆಗೆಂದು ವಿದ್ಯಾರ್ಥಿಗಳು, ಸಮಾಜ ಸೇವಕರು ಹಣ ಸಂಗ್ರಹ ಮಾಡಿದ್ದರು.ಓಂಕಾರ್ ಗುಣಮುಖನಾಗಿ ಬರಲಿ ಎನ್ನುವುದು ಎಲ್ಲರ ಪ್ರಾರ್ಥನೆಯಾಗಿತ್ತು. ಆದರೆ ವಿಧಿಯಾಟವೇ ಬೇರೆ. ಇಂದು ಓಂಕಾರ್ ಎಲ್ಲರನ್ನೂ ಅಗಲಿದ್ದಾನೆ.





