ಕಾಶಿಪಟ್ಣದಲ್ಲಿ ನಾಳೆ ಆಧಾರ್ ಸೇವಾ ಶಿಬಿರ, ದಂತ ತಪಾಸಣಾ ಶಿಬಿರ ಹಾಗೂ ವಾರ್ಷಿಕ ಮಜ್ಲಿಸುನ್ನೂರ್

Picture of Namma Bedra

Namma Bedra

Bureau Report

ಎಸ್.ಕೆ.ಎಸ್.ಎಸ್.ಎಫ್.ಕಾಶಿಪಟ್ಣ ಯೂನಿಟ್ ವತಿಯಿಂದ ಆಧಾರ್ ಸೇವಾ ಶಿಬಿರ, ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಉಚಿತ ದಂತ ತಪಾಸಣಾ ಶಿಬಿರ ಹಾಗೂ ರಾತ್ರಿ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮವು ನಾಳೆ (ಭಾನುವಾರ) ಕಾಶಿಪಟ್ಣ ಮುಹಿಯುದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಎರಡೂ ಶಿಬಿರಗಳನ್ನು ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕೆ.ಅವರು ಉದ್ಘಾಟಿಸಲಿದ್ದು ಕಾಶಿಪಟ್ಣ ಮಸೀದಿ ಖತೀಬರಾದ ಅಬೂಬಕ್ಕರ್ ನಿಝಾಮಿ ಅಲ್ ರಾಶಿದಿ ಅವರು ದುವಾ ಆಶೀರ್ವಚನ ನೀಡಲಿದ್ದಾರೆ.
ಮಸೀದಿ ಕಮಿಟಿ ಅಧ್ಯಕ್ಷ ಕೆ.ಎಸ್.ಪುತ್ತುಮೋನು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಎಂ.ಎ.ಗಫೂರ್, ರಕ್ಷಿತ್ ಶಿವರಾಮ್, ಡಾ.ಅಮರಶ್ರೀ ಶೆಟ್ಟಿ, ಪ್ರವೀಣ್ ಪಿಂಟೊ, ಮನೋಜ್ ಕುಮಾರ್ ಕಾಶಿಪಟ್ಣ,ಪ್ರವೀಣ್ ಕುಮಾರ್, ಅಶ್ರಫ್ ಮರೋಡಿ, ಸ್ಥಳೀಯ ಮಸೀದಿಗಳ ಅಧ್ಯಕ್ಷರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಎಸ್.ಕೆ.ಎಸ್.ಎಸ್.ಎಫ್.ನ ಕೆ.ಎಸ್.ಝೈದ್ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ವಾರ್ಷಿಕ ಮಜ್ಲಿಸುನ್ನೂರ್ ನಡೆಯಲಿದ್ದು ಖಾಝಿಯವರಾದ ಶೈಖುನಾ ಬಂಬ್ರಾಣ ಉಸ್ತಾದ್ ಹಾಗೂ ಬೆಳ್ತಂಗಡಿಯ ಅಸ್ಸಯ್ಯಿದ್ ಜಿಫ್ರಿ ತಂಙಳ್ ನೇತೃತ್ವ ನೀಡಲಿದ್ದಾರೆ.
ಆಸುಪಾಸಿನ ಗ್ರಾಮಸ್ಥರು ಈ ಎರಡೂ ಶಿಬಿರಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top