ಇತ್ತೀಚೆಗೆ ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಪರೀಕ್ಷೆ ಬರೆಯಲು ರಾಜ್ಯದಾದ್ಯಂತ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಬಂದಿದ್ದರು.
ಬೆದ್ರ ಹೌಸ್ ಫುಲ್ ಆಗಿ ತಂಗಲು ಜಾಗವಿಲ್ಲದೆ ಎಲ್ಲೋ ಮಲಗಿ ಒಂದು ರಾತ್ರಿ ಕಳೆದಿದ್ದರು.
ಹೀಗೆ ಬಂದವರ ಪೈಕಿ ಬೆಳಗಾವಿಯ ರಾಯ್ಬಾಗ್ ತಾಲೂಕಿನ ಮುಗಲ್ಗೋಡ್ ಗ್ರಾಮದ ನಿವಾಸಿ ಸಿದ್ದಪ್ಪ ಮಾನಶೇಟ್ಟಿ ( 48) ಅವರೂ ಒಬ್ಬರು.
ಅವರು ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಬಂದು ಪರೀಕ್ಷೆ ಬರೆಸಿ ಮರುದಿನ ‘ ನನಗೆ ಸ್ವಲ್ಪ ಕೆಲಸ ಇದೆ’ ಅಂತ ಮಕ್ಕಳನ್ನು ಬಸ್ ಹತ್ತಿಸಿ ಅವರು ಮೂಡುಬಿದಿರೆಯಲ್ಲಿ ಉಳಿದಿದ್ದರು.
ಆದರೆ ದಿನಗಳು ಕಳೆದರೂ ಅವರು ಮನೆಗೂ ಹೋಗದೆ, ಮೂಡುಬಿದಿರೆಯಲ್ಲೂ ಇರದೆ ಕಾಣೆಯಾಗಿದ್ದಾರೆ. ಅವರ ಮೊಬೈಲ್ ಕೂಡಾ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಆತಂಕಗೊಂಡಿರುವ ಅವರ ಮನೆಯವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಇವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಮೂಡುಬಿದಿರೆ ಪೊಲೀಸರಿಗೆ ತಿಳಿಸುವಂತೆ ಕೋರಲಾಗಿದೆ.











