ಮಾರ್ಪಾಡಿ- ಕಲ್ಲಬೆಟ್ಟು ನಡ್ಯೋಡಿ ದೈವಸ್ಥಾನ ಸಮಿತಿಯ ನೂತನ ಅಧ್ಯಕ್ಷರಾಗಿ ಸುಧೀಶ್ ಹೆಗ್ಡೆ ಹೊಸಮನೆ ಅವರು ಆಯ್ಕೆಯಾಗಿದ್ದಾರೆ.
ಸಮಿತಿಯ ಅಧ್ಯಕ್ಷರಾದ ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ಆನಂದ ಕುಮಾರ್ ಮತ್ತು ಉಮೇಶ್ ಹೆಗ್ಡೆ, ಕಾರ್ಯದರ್ಶಿಯಾಗಿ ವಿಶ್ವನಾಥ ಕೋಟ್ಯಾನ್, ಖಜಾಂಚಿಯಾಗಿ ಪ್ರಸನ್ನ ಹೆಗ್ಡೆ ಹಾಗೂ ಜತೆ ಕಾರ್ಯದರ್ಶಿಗಳಾಗಿ ಸುಧಾಕರ ಸುವರ್ಣ ಹಾಗೂ ಗಂಗಾಧರ ಡಿ.ಪೂಜಾರಿ ಅವರು ಆಯ್ಕೆಯಾಗಿದ್ದಾರೆ.











