ಸುಚರಿತ ಶೆಟ್ಟಿ ಕಾಂಗ್ರೆಸ್ ಗೆ ?

Picture of Namma Bedra

Namma Bedra

Bureau Report

ಕೆ.ಪಿ.ಸುಚರಿತ ಶೆಟ್ಟಿ. ಮೂಡುಬಿದಿರೆಯ ರಾಜಕೀಯ ವಲಯದಲ್ಲಿ ಈ ಹೆಸರು ಕೂಡಾ ಗಟ್ಟಿಯಾದದ್ದು.ರಾಜಕೀಯದಲ್ಲಿ ಹಣವೊಂದನ್ನು ಮಾಡಿಲ್ಲ ಎನ್ನುವುದನ್ನು ಬಿಟ್ಟರೆ ಪಂಚಾಯತ್ ನಿಂದ ಹಿಡಿದು ವಿಧಾನಸಭಾ ಕ್ಷೇತ್ರದ ಬಗ್ಗೆ ಚೆನ್ನಾಗಿ ಮಾಹಿತಿಯುಳ್ಳ ವ್ಯಕ್ತಿ.
ಕಳೆದ ಹಲವು ತಿಂಗಳಿಂದ ಸುಚರಿತ ಶೆಟ್ಟಿಯವರು ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಸುದ್ಧಿ ಇತ್ತು. ಈಗ ಅದಕ್ಕೆ ಮತ್ತಷ್ಟು ವೇಗ ಸಿಗುತ್ತಿದೆ.
ಅಭಯಚಂದ್ರರು ಇನ್ನು ಓಟಿಗೆ ನಿಲ್ಲುವುದಿಲ್ಲ ಎಂದು ಎನೌನ್ಸ್ ಮಾಡಿಯಾಗಿದೆ. ಮಿಥುನ್ ರೈ ಅವರು ಪಾಪ ಕೋಟಿಗಟ್ಟಲೆ ಖರ್ಚು ಮಾಡಿದರೂ ಈ ಕ್ಷೇತ್ರದ ಮತದಾರರು ಅವರ ಕೈ ಹಿಡಿಯಲಿಲ್ಲ. ಮೂಡುಬಿದಿರೆಗೆ ಅಪರೂಪವಾಗುತ್ತಿರುವುದು ಮತ್ತು ಕಾರ್ಯಕರ್ತರ ಸಂಪರ್ಕಕ್ಕೆ ಸಿಗದಿರುವುದು ಅವರ ನಿರಾಸಕ್ತಿಯನ್ನು ತೋರಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಸುಚರಿತ ಶೆಟ್ಟಿಯಂತಹ ಜಾತ್ಯಾತೀತ ನಾಯಕನ ಎಂಟ್ರಿಯಾದರೆ ಯಾವ ಕಾಂಗ್ರೆಸಿಗನೂ ವಿರೋಧ ಮಾಡಲ್ಲ, ಕಾಂಗ್ರೆಸ್ ಗೆ ಮತ್ತಷ್ಟು ಬಲ ಬರಲಿದೆ ಎನ್ನುವುದು ಕೆಲವರ ಲೆಕ್ಕಾಚಾರ.
ಸುಚರಿತ ಶೆಟ್ಟಿ ಅವರನ್ನು ಸರ್ವ ಧರ್ಮೀಯರೂ ಒಪ್ಪುತ್ತಾರೆ. ಈ ವರೆಗಿನ ಅವರ ರಾಜಕೀಯ ಜೀವನದಲ್ಲಿ ಅವರೆಂದೂ ಹೆಸರು ಕೆಡಿಸಿಕೊಂಡವರಲ್ಲ.
ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಬಂದಿರುವ ಅವರು ಗ್ರಾಮ ಪಂಚಾಯತ್ ನ ಸದಸ್ಯರಾಗಿ, ಅಧ್ಯಕ್ಷರಾಗಿ ಸುದೀರ್ಘ ಕಾಲದ ಅನುಭವ ಹೊಂದಿ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಉಳ್ಳವರು.
ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ,ಅಲ್ಲದೆ ಅವರ ಪತ್ನಿಯೂ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವುದು ಅದು ಸುಚರಿತ ಶೆಟ್ಟರಿಗಿರುವ ವರ್ಚಸ್ಸಿನಿಂದ ಎನ್ನುವುದು ಸತ್ಯ.
ಕೆಎಮ್ಎಫ್ ಎಂಬ ಹಾಲುತ್ಪಾದಕರ ಸೊಸೈಟಿಯ ಜಿಲ್ಲಾಧ್ಯಕ್ಷನಾಗುವುದೆಂದರೆ ಅದು ಸಣ್ಣ ವಿಷಯವಲ್ಲ.ಅಲ್ಲಿ ಘಟಾನುಘಟಿಗಳ ನಡುವೆ ಪೈಪೋಟಿ ಇರುತ್ತದೆ.ಆದರೂ ಕೆಎಮ್ಎಫ್ ಅಧ್ಯಕ್ಷರಾಗಿರುವುದು ಸುಚರಿತ ಶೆಟ್ಟರ ಬಹುದೊಡ್ಡ ಸಾಧನೆ.
ಸಹಕಾರಿ ಕ್ಷೇತ್ರದಲ್ಲೂ ಸುಚರಿತ ಶೆಟ್ಟರು ಹೆಸರುಗಳಿಸಿದ್ದಾರೆ.
ಸಾಮಾನ್ಯ ಜನರೊಂದಿಗೆ ಸಾಮಾನ್ಯನಾಗಿ ಸದಾ ಸರ್ವರೊಂದಿಗೂ ಬೆರೆಯುವ ಅವರ ವ್ಯಕ್ತಿತ್ವ ಸರ್ವರಿಗೂ ಇಷ್ಟವಾಗುತ್ತಿದೆ. ಮಾಜಿ ಸಚಿವ ಅಮರನಾಥ ಶೆಟ್ಟರ ಗರಡಿಯಲ್ಲಿ ಪಳಗಿರುವ ಅವರು ಶೆಟ್ಟರಂತೆ ಜಾತ್ಯಾತೀತರಾಗಿಯೇ ಗುರುತಿಸಿಕೊಂಡವರು.ಪ್ರಸ್ತುತ ಬಿಜೆಪಿಯಲ್ಲಿದ್ದರೂ ಹಿಂದೂ, ಮುಸ್ಲಿಂ, ಕ್ರೈಸ್ತ ಅಂತ ಸರ್ವಧರ್ಮೀಯರೂ ಒಪ್ಪುವಂತಹ ನಾಯಕ ಅವರು.
ರಾಜಕೋಯದಲ್ಲಿ ಹಂತಹಂತವಾಗಿ ಮೇಲೇರಿದರೂ ಒಂದು ಸ್ವಂತದ್ದಾದ ಕಾರು ಖರೀದಿಸಿದವರಲ್ಲ. ಅದೇ ಒಂದು ಓಲ್ಡ್ ಮಾಡೆಲ್ ನ ಟೂವೀಲರ್,ಅದು ಕೈಕೊಟ್ಟರೆ ಬಸ್. ಜನನಾಯಕನಾದವನು ಹೀಗೂ ಇರಬಹುದೆನ್ನುವುದನ್ನವರು ತೋರಿಸಿದ್ದಾರೆ.
ಇದೀಗ ಅವರು ಸಾಯ್ಲೆಂಟಾಗಿರುವ ಬೆದ್ರ ಕಾಂಗ್ರೆಸ್ ನ ಕೈ ಹಿಡಿದು ಮುನ್ನಡೆಸಲು ತಯಾರಿದ್ದಾರೆ. ಒಂದೊಳ್ಳೆಯ ಗಳಿಗೆಯ ಮುಹೂರ್ತದಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆನ್ನುವ ಮಾಹಿತಿ ಇದೆ.ಅವರೊಂದಿಗೆ ಇನ್ನೂ ಕೆಲ ನಾಯಕರು ಕೈ ಪಕ್ಷದತ್ತ ಬರಲು ತಯಾರಿದ್ದಾರೆ. ಆದರೆ ಅವರೆಲ್ಲರನ್ನೂ ಒಳ್ಳೆಯ ಮನಸ್ಸಿನಲ್ಲಿ ಎದ್ಕೊನಲು ಕಾಂಗ್ರೆಸ್ ನಾಯಕರು ಮನಸ್ಸು ಮಾಡಬೇಕಷ್ಟೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top