ಮೂಡುಬಿದಿರೆ ಮೂಲದ ಯುವಕ ದಮ್ಮಾಮ್ ನಲ್ಲಿ ಮೃತ್ಯು

Picture of Namma Bedra

Namma Bedra

Bureau Report

ಬಾಸ್ಕೆಟ್ ಬಾಲ್ ಪಂದ್ಯಾಟದ ವೇಳೆ ಕುಸಿದು ಬಿದ್ದು ಮೂಡುಬಿದಿರೆ ಮೂಲದ ಕೋಟೆಬಾಗಿಲು ನಿವಾಸಿ ರಿಯಾಝ್ ಎಂಬವರ ಪುತ್ರ ರಯ್ಯಾನ್ ( 16) ಎಂಬವರು ಮೃತಪಟ್ಟಿದ್ದಾರೆ.
ರಿಯಾಝ್ ಕುಟುಂಬ ಕೋಟೆಬಾಗಿಲಿನವರಾಗಿದ್ದು ಪ್ರಸ್ತುತ ದಮ್ಮಾಮ್ ನಲ್ಲಿ ವಾಸವಾಗಿದ್ದಾರೆ. ಅಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ರಯ್ಯಾನ್ ಬಾಸ್ಕೆಟ್ ಬಾಲ್ ಫೈನಲ್ ಪಂದ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಮೃತನ ಅಂತ್ಯಕ್ರಿಯೆ ದಮ್ಮಾಮ್ ನಲ್ಲೇ ನಡೆದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top