ಮೂಡುಬಿದಿರೆ ಯೋಜನಾ ಪ್ರಾಧಿಕಾರದಲ್ಲಿ ಕೃಷಿ ವಲಯದಲ್ಲೊಂದು ಪ್ರಾಬ್ಲೆಮ್ ಇತ್ತು. ಕೃಷಿ ವಲಯದಲ್ಲಿ ಗರಿಷ್ಠ 10 ಸೆನ್ಸ್ ವಿಸ್ತೀರ್ಣದ ಜಮೀನಿಗೆ ವಸತಿ ಉದ್ದೇಶದ ವಿನ್ಯಾಸ ನಕ್ಷೆ ಮತ್ತು ಭೂ ಪರಿವರ್ತನೆಗೆ ಕಳೆದ ಏಳೆಂಟು ತಿಂಗಳಿಂದ ಸಮಸ್ಯೆ ಉಂಟಾಗಿತ್ತು.
ಜನರು ವಸತಿ ಉದ್ದೇಶಕ್ಕೆ ಅರ್ಜಿ ಸಲ್ಲಿಸಿದರೂ ಈ ಒಂದು ಸಮಸ್ಯೆಯಿಂದ ಫೈಲ್ ಗಳು ಮುಂದೆ ಹೋಗುತ್ತಿರಲಿಲ್ಲ.
ಜಾಗದ ಬಗ್ಗೆ, ವಸತಿ ನಿರ್ಮಾಣಕ್ಕೆ ಬೇಕಾದ ದಾಖಲೆಗಳು,ಅದಕ್ಕೆ ಮೂಡಾ ಹಾಗೂ ಇತರ ಕಚೇರಿಗಳಿಂದ ಏನೇನು ದಾಖಲೆಗಳು ಬೇಕೆನ್ನುವುದು ಮೂಡಾ ಸದಸ್ಯರಾಗಿರುವ ಕರಿಂಜೆಯ ಸತೀಶ್ ಭಂಡಾರಿ ಮತ್ತು ಶೇಖರ್ ಬೊಳ್ಳಿ ಅವರಿಗೆ ಚೆನ್ನಾಗಿ ಗೊತ್ತಿದೆ.ಯಾಕೆಂದರೆ ಅವರು ಕಳೆದ ಹಲವು ವರ್ಷಗಳಿಂದ ಭೂ ವ್ಯವಹಾರಕ್ಕೆ ಸಂಬಂಧಿಸಿ ದಾಖಲೆಗಳನ್ನು ಮಾಡಿ ಕೊಡುವ ಅನುಭವಿಗಳು.
ಕೃಷಿ ವಲಯ ಎಂದು ಗುರುತಿಸಿಕೊಂಡಿರುವ ಕಲ್ಲಬೆಟ್ಟು, ಕರಿಂಜೆ ಹಾಗೂ ಮಾರೂರು ಗ್ರಾಮಗಳ ಜನರಿಗೆ ಈ ಸಮಸ್ಯೆಯಾಗುತ್ತಿದೆ ಎಂದರಿತ ಅವರು ಇದಕ್ಕೊಂದು ಪರಿಹಾರ ಕಾಣಿಸಬೇಕು,ನಮ್ಮೂರ ಜನರಿಗೆ ತೊಂದರೆಯಾಗಬಾರದೆಂದು ನಿರ್ಧರಿಸಿ ಒಂದು ತಂಡವನ್ನು ರಚಿಸುತ್ತಾರೆ.
ಆ ತಂಡದಲ್ಲಿ ಸತೀಶ್ ಭಂಡಾರಿ, ಶೇಖರ್ ಬೊಳ್ಳಿ, ಭೂಮಿ ಕನ್ಸ್ಟ್ರಕ್ಷನ್ಸ್ ಮಾಲಕ ವಿಶ್ವನಾಥ ಶೆಟ್ಟಿ, ಪುರಸಭಾ ಮಾಜಿ ಸದಸ್ಯ ಆಲ್ವಿನ್ ಮಿನೇಜಸ್ ಹಾಗೂ ಸರಕಾರಿ ನೌಕರರ ಸಂಘದ ನಿ.ಪೂ.ಅಧ್ಯಕ್ಷರಾಗಿರುವ ನಾಗೇಶ್ ಅವರಿರುತ್ತಾರೆ.
ಈ ತಂಡವು ಹಲವು ಬಾರಿ ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ವಿವರಿಸುತ್ತಾರೆ.ವಿಧಾನ ಪರಿಷತ್ ಸದಸ್ಯರಾಗಿರುವ ಐವನ್ ಡಿಸೋಜ ಅವರ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರಕ್ಕಾಗಿ ಶ್ರಮಿಸುತ್ತಾರೆ.
ಕೊನೆಗೂ ಈ ತಂಡದ ಅವಿರತ ಶ್ರಮಕ್ಕೆ ಫಲ ಸಿಕ್ಕಿದೆ. ಮೂಡುಬಿದಿರೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಕೃಷಿ ವಲಯದಲ್ಲಿ 10 ಸೆನ್ಸ್ ವಿಸ್ತೀರ್ಣದ ಜಮೀನಿಗೆ ವಸತಿ ಉದ್ದೇಶದ ವಿನ್ಯಾಸ ನಕ್ಷೆಗೆ ಮುಂದುವರಿಸಲು ರಾಜ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯವು ಷರತ್ತುಬದ್ಧ ಅನುಮತಿ ನೀಡಿದೆ.
ಈ ಅನುಮತಿ ನೀಡಿರುವುದರಿಂದ ಅದೆಷ್ಟೋ ಜನರಿಗೆ ಉಪಕಾರವಾಗಿದೆ.ಊರ ಜನರಿಗೆ ಉಪಕಾರ ಈ ತಂಡಕ್ಕೆ ಊರ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.



